Experiement on your own
ತಿರುಗಿಸುವ ಸಲಕರಣೆ ಅಥವಾ ವ್ರೆಂಚ್
ಸ್ವತಃ ಪ್ರಯೋಗ ನಡೆಸಿ
ನೀವು ನಮ್ಮ ಕಾರ್ಯಕ್ರಮದ ನಗರಗಳಿಂದ ಹೊರಗಿರಲಿ ಅಥವಾ ಕಲಿಯುವ ಹಂಬಲ ನಿಮಗಿರಲಿ, "Next Engineers: ನಿಮಗೆ ನೀವೇ ಸವಾಲು ಹಾಕಿಕೊಳ್ಳಿ" ಪುಟದಲ್ಲಿ ಮನೆ ಮತ್ತು ಶಾಲೆಯಲ್ಲಿ ಇಂಜಿನಿಯರಿಂಗ್ ಅನ್ವೇಷಣೆ ಮಾಡಲು ಬೇಕಾದ ಸಂಪನ್ಮೂಲಗಳನ್ನು ಒದಗಿಸುತ್ತದೆ. ಈ ಸಂಪನ್ಮೂಲಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ:
ಪ್ರಯೋಗ ನಡೆಸಿ ಮತ್ತು ಅನ್ವೇಷಿಸಿ: ಅದ್ಭುತ ವಿಜ್ಞಾನವನ್ನು ಅರಿಯಿರಿ ಮತ್ತು ಉತ್ತಮ ಜಗತ್ತನ್ನು ರೂಪಿಸಲು ಅದನ್ನು ಹೇಗೆ ಬಳಸಬಹುದು ಎಂಬುದನ್ನು ಅನ್ವೇಷಿಸಿ.
ನಿರ್ಮಿಸಿ!: ಒಬ್ಬರೇ ಆಗಲಿ ಅಥವಾ ಸ್ನೇಹಿತರೊಂದಿಗಾಗಲಿ, ನಮಗೆ ಅತ್ಯಂತ ಪ್ರಿಯವಾದ ಕೆಲವು ಇಂಜಿನಿಯರಿಂಗ್ ಸವಾಲುಗಳನ್ನು ಪ್ರಯತ್ನಿಸಿ ನೋಡಿ.
ಆಳವಾಗಿ ಅರಿಯಿರಿ: ಅದ್ಭುತ ಇಂಜಿನಿಯರ್‌ಗಳು ಮತ್ತು ಅವರ ಅಪ್ರತಿಮ ಸಾಧನೆಗಳ ಬಗ್ಗೆ ತಿಳಿಯಲು ಕೇವಲ 5 ನಿಮಿಷ ಮೀಸಲಿಡಿ.
ಇನ್ನಷ್ಟು ಚಟುವಟಿಕೆ
ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಾದ ನಿಮಗೆ ಕುತೂಹಲವನ್ನು ಉಳಿಸಿಕೊಳ್ಳಲು ಹಾಗೂ ಇದುವರೆಗೆ ಯಾರೂ ಯೋಚಿಸದ ಹೊಸ ಪ್ರಪಂಚಗಳನ್ನು ನಿರ್ಮಿಸಲು ಸಹಾಯ ಮಾಡುವ ಚಟುವಟಿಕೆ ಮಾರ್ಗದರ್ಶಿಗಳು, ಸಂಪನ್ಮೂಲಗಳು ಮತ್ತು ವೀಡಿಯೊ ಪ್ರಾತ್ಯಕ್ಷಿಕೆಗಳನ್ನು ಇಲ್ಲಿ ಕಾಣಬಹುದು.
ಆಳವಾಗಿ ಅರಿಯಿರಿ
ಪೈ ದಿನ ಭಾಗ 6: ಕಲಾತ್ಮಕ ಪೈ
<p>ಪೈ ದಿನ ಸದ್ಯದಲ್ಲಿಯೇ ಬರಲಿದೆ! ಪೈ (π) ಮೂಲಕ ಕಲೆ ಮತ್ತು ಗಣಿತಕ್ಕಿರುವ ನಂಟನ್ನು ಅನ್ವೇಷಿಸಿ!/p>
ಪೈ-ಕಾಸೋ ಕಲೆ
ನಿರ್ಮಿಸಿ!
ಗಂಭೀರವಾದ ಮೋಜು
<p>ಈ ನಿರ್ಮಿಸಿ! (ಬಿಲ್ಡ್ ಇಟ್) ಚಟುವಟಿಕೆಯಲ್ಲಿ, ಆಟದ ವಿನ್ಯಾಸ ಮತ್ತು ಎಂಜಿನಿಯರಿಂಗ್ ವಿನ್ಯಾಸದ ಪ್ರಕ್ರಿಯೆಯ ನಡುವಿನ ಸಾಮ್ಯತೆಗಳನ್ನು ಅನ್ವೇಷಿಸುತ್ತಾ, ನೀವು ನಿಮ್ಮದೇ ಆದ ಸ್ವಂತ ಟೇಬಲ್-ಟಾಪ್ ಆಟವನ್ನು ವಿನ್ಯಾಸಗೊಳಿಸುತ್ತೀರಿ ಮತ್ತು ನಿರ್ಮಿಸುತ್ತೀರಿ.&nbsp;</p>
ಆಟದ ಚಿತ್ರ
ಆಳವಾಗಿ ಅರಿಯಿರಿ
ಪೈ ದಿನ ಭಾಗ 7: ರುಚಿಕರವಾದ ಪೈ
<p>ಮಾರ್ಚ್ 14 ಪೈ ದಿನವಾಗಿದೆ! ರುಚಿಕರವಾದ ತಿನಿಸನ್ನು ಸವಿಯುತ್ತಲೇ, ನಮ್ಮೊಂದಿಗೆ ಪೈ (π) ನ ವಿಶೇಷತೆಗಳನ್ನು ಅನ್ವೇಷಿಸಿ!</p>
ಪೈಸ್
ಆಳವಾಗಿ ಅರಿಯಿರಿ
ಸೂಕ್ಷ್ಮ ಯಂತ್ರಗಳು ಭಾಗ 1
<p>ಅತೀ ಸೂಕ್ಷ್ಮವಾದವುಗಳ ಅತೀ ದೊಡ್ಡ ಜಗತ್ತಿಗೆ ಸುಸ್ವಾಗತ. ನೀವು ನ್ಯಾನೊತಂತ್ರಜ್ಞಾನದ ಬಗ್ಗೆ ಕೇಳಿರಬಹುದು, ಆದರೆ ಅಸಲಿಗೆ ಏನದು ಮತ್ತು ಅದು ಏಕೆ ಅಷ್ಟು ಮುಖ್ಯವಾದುದು? ಈ 'ನರ್ಡ್ ಔಟ್' ಸರಣಿಯಲ್ಲಿ ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ!</p>
ಚಿಟ್ಟೆ
ಪ್ರಯೋಗ ನಡೆಸಿ ಮತ್ತು ಅನ್ವೇಷಿಸಿ
ಒತ್ತಡದಲ್ಲಿ
ಈ ಪ್ರಯೋಗ ನಡೆಸಿ ಮತ್ತು ಅನ್ವೇಷಿಸಿ ಚಟುವಟಿಕೆಯಲ್ಲಿ, ನೀವು ಹೈಡ್ರಾಲಿಕ್ಸ್‌ನ ಅದ್ಭುತ ಶಕ್ತಿಯನ್ನು ಅರಿಯಲಿದ್ದೀರಿ. ಅಷ್ಟೇ ಅಲ್ಲದೆ, ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಇಂಜಿನಿಯರ್‌ಗಳು ಈ ಶಕ್ತಿಯನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅನ್ವೇಷಿಸಲಿದ್ದೀರಿ.
ಹೈಡ್ರಾಲಿಕ್ಸ್
ನಿರ್ಮಿಸಿ!
ಸನ್ನಿ-ಸೈಡ್ ಅಪ್

ಬೆಂಕಿ, ಗ್ಯಾಸ್ ಅಥವಾ ವಿದ್ಯುತ್ ಬಳಸದೆಯೇ ಒಂದು ಪರಿಪೂರ್ಣ ಉಪಹಾರವನ್ನು ತಯಾರಿಸುವ ಮಾರ್ಗವನ್ನು ವಿನ್ಯಾಸಗೊಳಿಸಿ ಮತ್ತು ನಿರ್ಮಿಸಿ.

ಆಳವಾಗಿ ಅರಿಯಿರಿ
JWST ಭಾಗ 4: ರೆಡ್‌ಶಿಫ್ಟ್
Webb ಅನ್ನು ವರ್ಣಪಟಲದ ಇನ್‌ಫ್ರಾರೆಡ್‌ ಭಾಗವನ್ನು ನೋಡುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಏಕೆ? ಈ ಆಳವಾಗಿ ಅರಿಯಿರಿ! ಸರಣಿಯಲ್ಲಿ ಅದರ ರಹಸ್ಯವನ್ನು ಕಂಡುಹಿಡಿಯಿರಿ!
JWST ಗೋಲ್ಡ್‌ ಮಿರರ್
ನಿರ್ಮಿಸಿ!
ಸೌಂಡ್‌ಪ್ರೂಫ್‌
ಈ ವಿನ್ಯಾಸದ ಸವಾಲಿನಲ್ಲಿ, ನೀವು ಸೌಂಡ್‌ಪ್ರೂಫ್‌ ಬಾಕ್ಸ್‌ ವಿನ್ಯಾಸಗೊಳಿಸಿ ನಿರ್ಮಿಸಬೇಕಿದೆ. ಪೆಟ್ಟಿಗೆಯ ಒಳಗಿನ ಶಬ್ದವು ಸಾಧ್ಯವಾದಷ್ಟು ಹೊರಕ್ಕೆ ಬಾರದಂತೆ ತಡೆಯುವುದು ಈ ಸವಾಲಿನ ಮುಖ್ಯ ಗುರಿಯಾಗಿದೆ.
ಹೀರುವ ಫೋಮ್
ಆಳವಾಗಿ ಅರಿಯಿರಿ
ಸಹಕಾರಿ ಧ್ವನಿಗಳು: ಭಾಗ 1
ಯಾವ ರೀತಿಯ ಅಲೆಗಳನ್ನು ಶಬ್ದದ ಅಲೆಗಳು ಎನ್ನಲಾಗುತ್ತದೆ? ಶಬ್ದವು ಹೇಗೆ ಚಲಿಸುತ್ತದೆ? ಈ ಆಳವಾಗಿ ಅರಿಯಿರಿ! ಸರಣಿಯಲ್ಲಿ ಶಬ್ದದ ಮೂಲಭೂತ ಅಂಶಗಳನ್ನು ಅರಿಯಿರಿ!
ಉದ್ದನೆಯ ಅಲೆಗಳು
ಪ್ರಯೋಗ ನಡೆಸಿ ಮತ್ತು ಅನ್ವೇಷಿಸಿ
ಉತ್ತಮ ಕಂಪನಗಳು
ಶಬ್ದ ಎಂದರೆ ಅಸಲಿಗೆ ಏನು ಮತ್ತು ಅದು ಹೇಗಿರುತ್ತದೆ? ಶಬ್ದದ ಗುಣಲಕ್ಷಣಗಳೊಂದಿಗೆ ಪ್ರಯೋಗ ನಡೆಸಿ ಮತ್ತು ವಿವಿಧ ರೀತಿಯ ಶಬ್ದಗಳು ಉಂಟುಮಾಡುವ ಮಾದರಿಗಳನ್ನು ಅನ್ವೇಷಿಸಿ.
ಶೀಟ್ ಮ್ಯೂಸಿಕ್ ಮೇಲಿರುವ ಹೆಡ್‌ಸೆಟ್ - ಕೃಪೆ ಕೆಲ್ಲಿ ಸಿಕ್ಕೆಮಾ ಅನ್‌ಸ್ಪ್ಲಾಶ್‌
ಆಳವಾಗಿ ಅರಿಯಿರಿ
JWST ಭಾಗ 5: ತಂಪಾಗಿರುವುದು
ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದ ಒಂದು ಬದಿ ಸೌರ ಶಾಖದಿಂದ ಕುದಿಯುತ್ತಿದ್ದರೆ, ಇನ್ನೊಂದು ಬದಿ ಮಾತ್ರ ಹಿಮದಂತೆ ತಂಪಾಗಿರುವುದು ಹೇಗೆ ಸಾಧ್ಯ? ಈ ಆಳವಾಗಿ ಅರಿಯಿರಿ (Nerd Out)! ಸರಣಿಯಲ್ಲಿ ಅದರ ರಹಸ್ಯವನ್ನು ಕಂಡುಹಿಡಿಯಿರಿ!
JWST ನಾಸಾದ ಸೂರ್ಯ ಶಾಖ ನಿರೋಧಕ ಕವಚ
ಪ್ರಯೋಗ ನಡೆಸಿ ಮತ್ತು ಅನ್ವೇಷಿಸಿ
ದ್ರವ ಕವಚ
ಈ ಪ್ರಯೋಗ ನಡೆಸಿ ಮತ್ತು ಅನ್ವೇಷಿಸಿ ಚಟುವಟಿಕೆಯಲ್ಲಿ, ನೀವು ಘನವಸ್ತುವೂ ಆಗಿರುವ ಒಂದು ದ್ರವವನ್ನು ಪತ್ತೆಹಚ್ಚಲಿದ್ದೀರಿ. ಅದರ ಗುಣಲಕ್ಷಣಗಳೊಂದಿಗೆ ಪ್ರಯೋಗ ನಡೆಸಿ ಮತ್ತು ವಾಸ್ತವ-ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಇಂಜಿನಿಯರ್‌ಗಳು ಇದನ್ನು ಹೇಗೆ ಬಳಸಬಹುದು ಎಂಬುದನ್ನು ಅನ್ವೇಷಿಸಿ.
ಓಬ್ಲೆಕ್
ನಿರ್ಮಿಸಿ!
ಚುಕ್ಕಿಗಳು ಮತ್ತು ಡ್ಯಾಶ್‌ಗಳು
ನಿಜ ಜೀವನದಲ್ಲಿ ವಿದ್ಯುತ್ಕಾಂತಗಳನ್ನು (ಎಲೆಕ್ಟ್ರೋಮ್ಯಾಗ್ನೆಟ್‌ಗಳು) ಹೇಗೆ ಬಳಸುತ್ತಾರೆ ಎಂಬುದನ್ನು ಅನ್ವೇಷಿಸೋಣ. ಈ ನಿರ್ಮಿಸಿ! ಚಟುವಟಿಕೆಯಲ್ಲಿ, ನೀವು ನಿಮ್ಮದೇ ಆದ ಸ್ವಂತ ಟೆಲಿಗ್ರಾಫ್ ಯಂತ್ರವನ್ನು ತಯಾರಿಸಲಿದ್ದೀರಿ!
ಎಲೆಕ್ಟ್ರೋಮ್ಯಾಗ್ನೆಟ್‌_ಅನ್‌ಸ್ಪ್ಲಾಶ್
ಆಳವಾಗಿ ಅರಿಯಿರಿ
ಜೇಮ್ಸ್‌ ವೆಬ್‌ ಸ್ಪೇಸ್‌ ದೂರದರ್ಶಕ ಭಾಗ 1: ಹಿಂದಿನ ಕಾಲವನ್ನು ನೋಡುವಿಕೆ
ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದ ಒಂದು ಬದಿ ಸೌರ ಶಾಖದಿಂದ ಕುದಿಯುತ್ತಿದ್ದರೆ, ಇನ್ನೊಂದು ಬದಿ ಮಾತ್ರ ಹಿಮದಂತೆ ತಂಪಾಗಿರುವುದು ಹೇಗೆ ಸಾಧ್ಯ? ಈ ಆಳವಾಗಿ ಅರಿಯಿರಿ! ಸರಣಿಯಲ್ಲಿ ಅದರ ಹಿಂದಿನ ರಹಸ್ಯವನ್ನು ಕಂಡುಹಿಡಿಯಿರಿ!
NASA JWST
description

ಶಿಕ್ಷಕರು ಮತ್ತು ಪೋಷಕರಿಗಾಗಿ ಒಂದು ಸೂಚನೆ

 
 
Next Engineers ಸಂಸ್ಥೆಯಲ್ಲಿ, ಇಂಜಿನಿಯರಿಂಗ್ ಒಂದು ಅದ್ಭುತ ಕ್ಷೇತ್ರ ಮತ್ತು ಅದು ಪ್ರತಿಯೊಬ್ಬರಿಗೂ ಮುಕ್ತವಾಗಿದೆ ಎಂದು ನಾವು ನಂಬುತ್ತೇವೆ. ಆದ್ದರಿಂದಲೇ, ಪ್ರತಿಯೊಬ್ಬರಿಗೂ ಇಂಜಿನಿಯರಿಂಗ್ ಅನ್ವೇಷಿಸಲು ಅವಕಾಶ ನೀಡುವ ಸಲುವಾಗಿ ನಾವು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಎಂಬ ಚಟುವಟಿಕೆ ಮತ್ತು ಸಂಪನ್ಮೂಲಗಳ ಸರಣಿಯನ್ನು ರೂಪಿಸಿದ್ದೇವೆ.
 
ಇಲ್ಲಿ ನೀವು ಮೂರು ವಿಭಿನ್ನ ರೀತಿಯ ಸಂಪನ್ಮೂಲಗಳನ್ನು ಕಾಣಬಹುದು:
 
  • ಪ್ರಯೋಗ ನಡೆಸಿ ಮತ್ತು ಅನ್ವೇಷಿಸಿ: ಇದು ವಿದ್ಯಾರ್ಥಿಗಳಿಗೆ ಪ್ರಮುಖ ವೈಜ್ಞಾನಿಕ ವಿದ್ಯಮಾನಗಳನ್ನು ಸಂಶೋಧಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಅವುಗಳನ್ನು ಹೇಗೆ ಬಳಸಬಹುದು ಎಂದು ಯೋಚಿಸಲು ಅವಕಾಶ ನೀಡುತ್ತದೆ. ಪ್ರತಿಯೊಂದು ಚಟುವಟಿಕೆಯು ತರಗತಿಯಲ್ಲಿ ಅಥವಾ ಮನೆಯಲ್ಲಿ ಮಾಡಬಹುದಾದ ಸರಳ ಪ್ರಯೋಗಗಳೊಂದಿಗೆ ಆರಂಭವಾಗುತ್ತದೆ. ಕಲಿಕೆಯನ್ನು ಮತ್ತಷ್ಟು ಆಳವಾಗಿಸಲು ಇಲ್ಲಿ ಹಲವಾರು ಸಲಹೆಗಳಿವೆ. ಉತ್ತಮ ಜಗತ್ತನ್ನು ನಿರ್ಮಿಸಲು ಇಂಜಿನಿಯರಿಂಗ್ ಪರಿಹಾರಗಳನ್ನು ಕಂಡುಕೊಳ್ಳುವ ಸವಾಲಿನೊಂದಿಗೆ ಇದು ಕೊನೆಗೊಳ್ಳುತ್ತದೆ. ನೀವು ಎಷ್ಟು ದೂರ ಸಾಗಬೇಕೆಂಬುದು ನಿಮಗೆ ಬಿಟ್ಟದ್ದು; ಕೇವಲ ಆರಂಭಿಕ ಸಂಶೋಧನೆ ಮಾಡಬಹುದು ಅಥವಾ ನಿಮ್ಮ ವಿದ್ಯಾರ್ಥಿ ಅಥವಾ ಮಗನಿಗೆ/ಮಗಳಿಗೆ ಸ್ವಂತ ಇಂಜಿನಿಯರಿಂಗ್ ವಿನ್ಯಾಸಗಳನ್ನು ನಿರ್ಮಿಸಿ ಪರೀಕ್ಷಿಸಲು ಸವಾಲು ಹಾಕಬಹುದು.
  • ನಿರ್ಮಿಸಿ!: ಇವು ನಮಗೆ ಅತ್ಯಂತ ಪ್ರಿಯವಾದ ಕೆಲವು ಇಂಜಿನಿಯರಿಂಗ್ ವಿನ್ಯಾಸ ಸವಾಲುಗಳಾಗಿರುತ್ತವೆ. ಹೆಸರೇ ಸೂಚಿಸುವಂತೆ, ಇವು ವ್ಯಕ್ತಿಗಳು ಅಥವಾ ತಂಡಗಳಿಂದ ಭೌತಿಕ ನಿರ್ಮಾಣವನ್ನು ಬಯಸುವ ಸವಾಲುಗಳಾಗಿರುತ್ತವೆ. ಸಣ್ಣ ಮತ್ತು ದೊಡ್ಡ ಮಕ್ಕಳೆಲ್ಲರಿಗೂ ಸುಲಭವಾಗುವಂತೆ, ವಿವಿಧ ಹಂತದ ಸಂಕೀರ್ಣತೆಗಳನ್ನು ಹೊಂದಿರುವ ವಿನ್ಯಾಸ ಪರಿಹಾರಗಳನ್ನು ನಾವು ಆರಿಸಿಕೊಂಡಿದ್ದೇವೆ. ಪ್ರತಿಯೊಂದು ಸವಾಲಿನಲ್ಲಿಯೂ, ಹೆಚ್ಚು ಆಸಕ್ತಿ ಇರುವ ಯುವ ಇಂಜಿನಿಯರ್‌ಗಳಿಗಾಗಿ ಮುಂದಿನ ಹಂತದ ಸವಾಲುಗಳನ್ನು ನೀಡಲಾಗಿದೆ. ನಿಮ್ಮ ವಿದ್ಯಾರ್ಥಿ ಅಥವಾ ಮಗ/ಮಗಳಿಗೆ ಇಂಜಿನಿಯರಿಂಗ್ ವಿನ್ಯಾಸ ಪ್ರಕ್ರಿಯೆಯಲ್ಲಿ ಮಾರ್ಗದರ್ಶನ ನೀಡಿ ಅಥವಾ ನೀವೇ ಅವರೊಂದಿಗೆ ಸೇರಿ ನಿರ್ಮಿಸಿ!.
  • ಆಳವಾಗಿ ಅರಿಯಿರಿ: ಇದು ವಿಶ್ವದ ಕೆಲವು ಅದ್ಭುತ ಇಂಜಿನಿಯರ್‌ಗಳು ಮತ್ತು ಅವರ ಅಪ್ರತಿಮ ಸಾಧನೆಗಳ ಬಗ್ಗೆ ಸಂಕ್ಷಿಪ್ತ ವಿವರಣೆಗಳನ್ನು ನೀಡುತ್ತದೆ. ಇದರಲ್ಲಿರುವ ವಿಜ್ಞಾನ ಮತ್ತು ಗಣಿತದ ಬಗ್ಗೆ ಓದುಗರು ಆಳವಾಗಿ ಯೋಚಿಸಲು ಇಲ್ಲಿ ಪೂರಕ ಅಂಶಗಳಿವೆ. ಶಿಕ್ಷಕರೇ, ನಿಮ್ಮದೇ ಆದ ಸಮಗ್ರ STEM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ) ಕಲಿಕಾ ಅನುಭವಗಳನ್ನು ರೂಪಿಸಲು ಅಥವಾ ತರಗತಿಯ ಸಂಶೋಧನಾ ಯೋಜನೆಗಳಿಗೆ ಆಧಾರವಾಗಿ ಆಳವಾಗಿ ಅರಿಯಿರಿ ಅನ್ನು ಬಳಸಿ. ಪೋಷಕರೇ, ಇಂಜಿನಿಯರ್‌ಗಳು ನಿರ್ಮಿಸಬಹುದಾದ ಅದ್ಭುತ ಪ್ರಪಂಚದ ಬಗ್ಗೆ ನಿಮ್ಮ ಮಗುವಿನೊಂದಿಗೆ ಸಂಭಾಷಣೆ ಆರಂಭಿಸಲು ಇದನ್ನು ಬಳಸಿ.
     
ಎಲ್ಲಕ್ಕಿಂತ ಮಿಗಿಲಾಗಿ, ನೀವು ಮತ್ತು ಮಕ್ಕಳು ಈ ಕಲಿಕೆಯನ್ನು ಆನಂದಿಸಬೇಕೆಂದು ನಾವು ಬಯಸುತ್ತೇವೆ!
 
ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದರೆ ಅಥವಾ ಪ್ರತಿಕ್ರಿಯೆ ನೀಡಬಯಸಿದರೆ, ನಮ್ಮನ್ನು NextEngineers@fhi360.org ಮೂಲಕ ಸಂಪರ್ಕಿಸಬಹುದು. Next Engineers ಜೊತೆಗೆ ಅನ್ವೇಷಣೆ ನಡೆಸಿದ್ದಕ್ಕಾಗಿ ಧನ್ಯವಾದಗಳು!