ಮುಂದಿನ ಪೀಳಿಗೆಯ ಇಂಜಿನಿಯರ್‌ಗಳನ್ನು ರೂಪಿಸಿ
ನಮ್ಮ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಜಗತ್ತನ್ನು ಪ್ರಾಯೋಗಿಕವಾಗಿ ಪರಿಚಯಿಸಲು ನಿಮ್ಮಂತಹ ಸ್ವಯಂಸೇವಕರ ಮೇಲೆ Next Engineers ಅವಲಂಬಿತವಾಗಿದೆ. ನಿಮ್ಮಂತಹ ನೈಜ ವೃತ್ತಿಪರರನ್ನು ಭೇಟಿಯಾಗುವ, ಸಂದೇಹಗಳನ್ನು ಕೇಳುವ ಮತ್ತು ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಾಗ, ತಮ್ಮ ವೃತ್ತಿಜೀವನದ ಹಾದಿಯನ್ನು ಸ್ಪಷ್ಟವಾಗಿ ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ.
 
ಈ ಪುಟದಲ್ಲಿ, ನೀವು Next Engineers ಸ್ವಯಂಸೇವಕರಾಗಲು ಮತ್ತು ತಂಡವನ್ನು ಸೇರಿದ ನಂತರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ವಿವಿಧ ಸಂಪನ್ಮೂಲಗಳನ್ನು ಕಾಣಬಹುದು.
 
ನಮ್ಮ ಸಂಪನ್ಮೂಲಗಳನ್ನು ಪಡೆಯಲು, ದಯವಿಟ್ಟು ನಿಮ್ಮ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ 'ಲಾಗ್‌ ಇನ್‌' ಬಟನ್ ಬಳಸಿ ಖಾತೆಯನ್ನು ರಚಿಸಿ. ನೋಂದಾಯಿಸುವಾಗ "ಸ್ವಯಂಸೇವಕರು" ಎಂಬ ಆಯ್ಕೆಯನ್ನು ಆರಿಸಿಕೊಳ್ಳುವುದನ್ನು ಮರೆಯಬೇಡಿ. ನೀವು ಸೈನ್-ಇನ್ ಆದ ನಂತರ, ಮೇಲಿರುವ 'ಸಂಪನ್ಮೂಲಗಳು' ಮೆನು ಟ್ಯಾಬ್ ಮೂಲಕ ನಮ್ಮ ಎಲ್ಲಾ ಸಂಪನ್ಮೂಲಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು  NextEngineers@fhi360.org ಗೆ ಇಮೇಲ್ ಮಾಡಿ.
ಮಾರ್ಟಿನ್‌
description

ನೀವು ಇನ್ನೂ ಸಂಪರ್ಕಿಸಿರದಿದ್ದರೆ, ದಯವಿಟ್ಟು ನಿಮ್ಮ ಸ್ಥಳದ ಟೀಮ್‌ ಲೀಡ್ ಅನ್ನು ಸಂಪರ್ಕಿಸಿ. ನಿಮ್ಮ ತಂಡದ ಸಂಪರ್ಕ ವ್ಯಕ್ತಿ ಯಾರೆಂದು ತಿಳಿಯಲು ನಿಮ್ಮ ತಂಡದ ಪುಟಕ್ಕೆ ಭೇಟಿ ನೀಡಿ:

description

ಪ್ರತಿಯೊಬ್ಬ ಸ್ವಯಂಸೇವಕರು Next Engineers ಬಗ್ಗೆ ಮತ್ತು ನಿಮಗಾಗಿ ಲಭ್ಯವಿರುವ ಸ್ವಯಂಸೇವಕ ಅವಕಾಶಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಮ್ಮ 15 ನಿಮಿಷಗಳ Volunteer Orientation eModule ಅನ್ನು ಪೂರ್ಣಗೊಳಿಸಬೇಕು. ಅದನ್ನು ಪೂರ್ಣಗೊಳಿಸಿದ ನಂತರ, ಹೆಚ್ಚಿನ ಮಾಹಿತಿಗಾಗಿ  Volunteer Activation Kit ಅನ್ನು ಪರಿಶೀಲಿಸಿ.


Image
2025-26_volunteer_training_series_info
Next Engineers ಸ್ವಯಂಸೇವಕರ ತರಬೇತಿ ಸರಣಿ

ನಮ್ಮ 2025-2026ರ ಸ್ವಯಂಸೇವಕರ ತರಬೇತಿ ಸರಣಿಯು ಶೀಘ್ರದಲ್ಲೇ ಬರಲಿದೆ! ಈ ಐಚ್ಛಿಕ ವರ್ಚುವಲ್ ತರಬೇತಿಗಳು ಎಲ್ಲಾ Next Engineers ನಗರಗಳ ಸ್ವಯಂಸೇವಕರಿಗೆ ಮುಕ್ತವಾಗಿವೆ. ಮುಂಬರುವ ವಿಷಯಗಳು ಮತ್ತು ಸೆಷನ್ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ಹಂಚಿಕೊಳ್ಳುತ್ತೇವೆ. ನಿಮ್ಮ ಜಾಗತಿಕ ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸಲು ಮತ್ತು ಹೊಸದನ್ನು ಕಲಿಯಲು ಸಿದ್ಧರಾಗಿ ಹಾಗೂ ಈ ತರಬೇತಿಗೆ ಸೇರಿಕೊಳ್ಳಿ!

Next Engineers ಸ್ವಯಂಸೇವಕರ ತರಬೇತಿ ಸರಣಿ

  • ಡಿಸೆಂಬರ್ 3 - Next Engineers ಪ್ರಭಾವ ಮತ್ತು ದತ್ತಾಂಶ ಒಳನೋಟಗಳು (Next Engineers Impact & Data Insights)
  • ಫೆಬ್ರವರಿ 25 - ಯುವ ಮೆದುಳಿನ ಬೆಳವಣಿಗೆ (Youth Brain Development)
  • ಏಪ್ರಿಲ್‌ 15 - ಕಾರ್ಯನಿರತ ಸ್ವಯಂಸೇವಕರು: ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದು (Volunteers in Action: Driving Student Engagement)
  • ಜೂನ್‌ 10 - ಶೀಘ್ರದಲ್ಲೇ ತಿಳಿಸಲಾಗುವುದು!

ಪ್ರತಿ ಸೆಷನ್‌ಗಿಂತ ಮೊದಲು Outlook ಆಮಂತ್ರಣಗಳನ್ನು ಕಳುಹಿಸಲಾಗುತ್ತದೆ. ಎಲ್ಲಾ ತರಬೇತಿಗಳು Teams ಮೂಲಕ ನಡೆಯಲಿವೆ.

ಪ್ರಶ್ನೆಗಳಿವೆಯೇ? Next Engineers ತಂಡವನ್ನು NextEngineers@fhi360.org ಮೂಲಕ ಸಂಪರ್ಕಿಸಿ.

ಇನ್ನಷ್ಟು ಸಂಪನ್ಮೂಲಗಳು
description

ಒಮ್ಮೆ ನೀವು ನಿಮ್ಮ ನಗರದ ತಂಡದೊಂದಿಗೆ ಸಂಪರ್ಕ ಸಾಧಿಸಿ ಮತ್ತು Next Engineers ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ, ನಮ್ಮ ಎಲ್ಲಾ ಸಂಪನ್ಮೂಲಗಳನ್ನು 'ಸಂಪನ್ಮೂಲಗಳು' ಮೆನು ಟ್ಯಾಬ್ ಅಡಿಯಲ್ಲಿ ನೋಡಬಹುದು. ಹೆಚ್ಚಿನ ಸಂಪನ್ಮೂಲಗಳನ್ನು ಪಡೆಯಲು ನೀವು ಸೈನ್-ಇನ್ ಮಾಡಿರಲೇಬೇಕು. ನೀವು ಆರಂಭಿಸಲು ನಮ್ಮ ಕೆಲವು ಪ್ರಮುಖ ಸಂಪನ್ಮೂಲಗಳು ಇಲ್ಲಿವೆ:

ವರದಿ ಮಾಡುವ ಫಾರ್ಮ್‌
ನಿಮ್ಮ ಗಂಟೆಗಳನ್ನು ದಾಖಲಿಸುವುದು

Engineering Discovery Expansion ಮತ್ತು ಮ್ಯಾನೇಜ್‌ಮೆಂಟ್‌ ಟೀಮ್‌ಗಾಗಿ ನೀವು ಸ್ವಯಂಸೇವೆ ಸಲ್ಲಿಸಿದ ಗಂಟೆಗಳನ್ನು ದಾಖಲಿಸಲು ಈ ಫಾರ್ಮ್ ಬಳಸಿ.

ಉದ್ಯೋಗಿ ಗಂಟೆಗಳ ತಂಬ್‌ನೈಲ್
ಸಂಪನ್ಮೂಲ
ಫೆಸಿಲಿಟೇಟರ್ ಮತ್ತು ಸ್ವಯಂಸೇವಕರ ನ್ಯೂಸ್‌ಲೆಟರ್

Engineering Academy, Camp ಮತ್ತು Discovery ಕಾರ್ಯಕ್ರಮದ ಸಂಘಟಕರು ಹಾಗೂ ಸ್ವಯಂಸೇವಕರ ನಿರಂತರ ಪ್ರಗತಿ ಮತ್ತು ಜ್ಞಾನವರ್ಧನೆಗಾಗಿ ಈ ತ್ರೈಮಾಸಿಕ ಪ್ರಕಟಣೆಯನ್ನು ಹೊರತರಲಾಗುತ್ತಿದೆ. 

ಇತ್ತೀಚಿನ ಸಂಚಿಕೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಹಳೆಯ ಸಂಚಿಕೆಗಳನ್ನು ಓದಿ.

ನ್ಯೂಸ್‌ಲೆಟರ್ ತಂಬ್‌ನೈಲ್
ಇ-ಮಾಡ್ಯೂಲ್‌
ಕಾರ್ಯಕ್ರಮದಲ್ಲಿ ಭಾಗವಹಿಸುವವರ ರಕ್ಷಣೆ

ಕಾರ್ಯಕ್ರಮದ ಭಾಗಿಗಳ ಸುರಕ್ಷತೆ ಮತ್ತು ರಕ್ಷಣೆಯ ಕುರಿತಾದ ಈ ಮಾರ್ಗದರ್ಶಿಯು, ಯುವಜನರೊಂದಿಗೆ ಕೆಲಸ ಮಾಡುವ ವಯಸ್ಕರಿಗೆ ಪೂರಕ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಈ ಇ-ಮಾಡ್ಯೂಲ್ ಅನ್ನು ವೀಕ್ಷಿಸುವುದು ಹೇಗೆ ಎಂಬ ಬಗ್ಗೆ ಈ ಮಾರ್ಗದರ್ಶಿಯು ಹಂತ-ಹಂತದ ಸೂಚನೆಗಳನ್ನು ನೀಡುತ್ತದೆ.

ಸೇಫ್‌ಗಾರ್ಡಿಂಗ್ ತಂಬ್‌ನೈಲ್‌
ಟಿಪ್‌ಶೀಟ್‌
ಯುವಜನರೊಂದಿಗೆ ಕೆಲಸ ಮಾಡುವುದು

ಈ ಟಿಪ್ ಶೀಟ್ ಸ್ವಯಂಸೇವಕರಿಗೆ ಮತ್ತು ಫೆಸಿಲಿಟೇಟರ್‌ಗೆ ಪ್ರಾಯೋಗಿಕ ಮಾಹಿತಿ ನೀಡುತ್ತದೆ, ಇದು ಹ್ಯಾಂಡ್ಸ್-ಆನ್ ಮತ್ತು ಮೈಂಡ್ಸ್-ಆನ್ ಕಲಿಕಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ಸಹಾಯ ಮಾಡುತ್ತದೆ.

ಹೇಗೆ ಫೆಸಿಲಿಟೇಟ್ ಮಾಡುವುದು ತಂಬ್‌ನೈಲ್‌
ವರದಿ ಮಾಡುವ ಫಾರ್ಮ್
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

GE Aerospace ಮತ್ತು GE Vernova ಉದ್ಯೋಗಿಗಳು Next Engineers ಜೊತೆಗಿನ ತಮ್ಮ ಸ್ವಯಂಸೇವೆಯ ಅನುಭವದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಈ ಫಾರ್ಮ್ ಬಳಸಬೇಕು.

ಫೀಡ್‌ಬ್ಯಾಕ್ ಫಾರ್ಮ್ ತಂಬ್‌ನೈಲ್