Skip to main content

User account menu

  • Log in
Home Next Engineers
  • ಬಗ್ಗೆ
    • ನಮ್ಮ ಪ್ರೋಗ್ರಾಂ
    • Our Leadership
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
    ಬದಲಾವಣೆಗಳನ್ನು ತರುವುದು
    ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
    ಇಂಜಿನಿಯರಿಂಗ್ ವಿದ್ಯಾರ್ಥಿಗಳು
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
    ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
    ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
    ಎತ್ತರಕ್ಕೆ ಗುರಿ ಇಡಿ
  • News
    ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
    Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
    ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು
  • ಲಾಗ್‌ ಇನ್

Main navigation

  • ಬಗ್ಗೆ
    • ನಮ್ಮ ಪ್ರೋಗ್ರಾಂ
    • Our Leadership
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
  • News
  • ಲಾಗ್‌ ಇನ್

Cities navigation

ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
ಎತ್ತರಕ್ಕೆ ಗುರಿ ಇಡಿ

Inspiration navigation

ಬದಲಾವಣೆಗಳನ್ನು ತರುವುದು
ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳು

News navigation

ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು

Resources navigation

ಎಲ್ಲಾ ಸಂಪನ್ಮೂಲಗಳನ್ನು ಅನ್ವೇಷಿಸಿ
ಯಶಸ್ವಿ Next Engineers ಕಾರ್ಯಕ್ರಮವನ್ನು ನಡೆಸಲು ಅಗತ್ಯವಿರುವ ಪರಿಕರಗಳನ್ನು ಇಲ್ಲಿ ಕಂಡುಕೊಳ್ಳಿ. ಇದರಲ್ಲಿ ಸಂವಹನ ಸಾಮಗ್ರಿಗಳು ಮತ್ತು ಟೆಂಪ್ಲೇಟ್‌ಗಳು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಔಟ್‌ರೀಚ್ ಸಾಮಗ್ರಿಗಳು, ವಿದ್ಯಾರ್ಥಿ ಚಟುವಟಿಕೆ ಮಾರ್ಗದರ್ಶಿಗಳು, ಇಂಜಿನಿಯರಿಂಗ್ ಸವಾಲುಗಳು ಮತ್ತು ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಂಪನ್ಮೂಲಗಳನ್ನು ಸೇರಿಸಲಾಗಿವೆ.
ತರಗತಿಯ ಕೊಠಡಿಯ ಮೇಜಿನ ಬಳಿ ಕುಳಿತು ನಗುತ್ತಿರುವ ಇಬ್ಬರು ಪುರುಷ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಕೃಪೆ: ಅನ್‌ಸ್ಪ್ಲಾಶ್‌ನಲ್ಲಿ ಜೆಸ್ವಿನ್ ಥಾಮಸ್
Challenge Yourself
Find activity guides and resources to help you as students, parents, and teachers stay curious and build worlds that haven't even been thought of yet.
Challenge yourself
Measuring Impact
Partners and volunteers can explore real-time data on each Next Engineers program to see the difference they’re making in their communities.
Facilitator Amber showing the whitebaord

Engineering Academy

ಗ್ರಾಡ್‌ ಹ್ಯಾಟ್‌
Engineering Academy
ಬದುಕನ್ನೇ ಬದಲಿಸುವ ವಿಶಿಷ್ಟ ಕಲಿಕೆಯ ಅನುಭವ
 
ಮೂರು ವರ್ಷಗಳ ಅವಧಿಯಲ್ಲಿ, ವಿದ್ಯಾರ್ಥಿಗಳು (15 ರಿಂದ 18 ವರ್ಷದವರು) ಇಂಜಿನಿಯರ್‌ಗಳಂತೆ ಯೋಚಿಸಲು ಮತ್ತು ಕಾರ್ಯನಿರ್ವಹಿಸಲು ಕಲಿಯುತ್ತಾರೆ ಹಾಗೂ ತಮ್ಮ ಉನ್ನತ ಶಿಕ್ಷಣದ ಕನಸಿಗೆ ಭದ್ರ ಬುನಾದಿ ಹಾಕಿಕೊಳ್ಳುತ್ತಾರೆ. ಶಾಲಾ ಸಮಯದ ಹೊರತಾಗಿ 3 ವರ್ಷಗಳಲ್ಲಿ ಒಟ್ಟು 220 ಕ್ಕೂ ಹೆಚ್ಚು ಗಂಟೆಗಳ ಕಾಲ ನಡೆಯುವ ಈ 'ಅಕಾಡೆಮಿ' ಕಾರ್ಯಕ್ರಮವು ಯುವಜನರಿಗೆ ಇಂಜಿನಿಯರಿಂಗ್ ಲೋಕದ ಸವಾಲುಗಳನ್ನು ಎದುರಿಸಲು ಬೇಕಾದ ಕೌಶಲಗಳನ್ನು ನೀಡುತ್ತದೆ. ಇದರಲ್ಲಿ ರೋಚಕ ವಿನ್ಯಾಸದ ಸವಾಲುಗಳು, ವೃತ್ತಿಜೀವನದ ಮಾರ್ಗದರ್ಶನ ಮತ್ತು ಕಾಲೇಜು ಪ್ರವೇಶಕ್ಕೆ ಬೇಕಾದ ತರಬೇತಿಗಳು ಸೇರಿವೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಇಂಜಿನಿಯರಿಂಗ್ ಪದವಿಗೆ ಸೇರುವ ವಿದ್ಯಾರ್ಥಿಗಳಿಗೆ GE Aerospace Foundation ವತಿಯಿಂದ ಭಾಗಶಃ ಸ್ಕಾಲರ್‌ನಶಿಪ್‌ನ ಸೌಲಭ್ಯವೂ ದೊರೆಯಲಿದೆ.
 
2025 ರಿಂದ, 2-ವರ್ಷಗಳ ಇಂಜಿನಿಯರಿಂಗ್ ಅಕಾಡೆಮಿ ಕಾರ್ಯಕ್ರಮಕ್ಕೆ ಇಂಜಿನಿಯರಿಂಗ್ ಅಕಾಡೆಮಿ ವಿದ್ಯಾರ್ಥಿಗಳು ಸೇರಲಿದ್ದು, ಈ ಎರಡು ವರ್ಷಗಳಲ್ಲಿ ಶಾಲಾ ಅವಧಿಯ ಹೊರತಾಗಿ ಒಟ್ಟು 180ಕ್ಕೂ ಹೆಚ್ಚು ಗಂಟೆಗಳ ತರಬೇತಿ ಇರುತ್ತದೆ.
ಅಕಾಡೆಮಿ ವಿವರಣೆ ವಿನ್ಯಾಸದ ಸವಾಲಿನ ಉದಾಹರಣೆ ಕಾಲೇಜು-ಸಿದ್ಧತಾ ಚಟುವಟಿಕೆ
ಜೋಹಾನ್ಸ್‌ಬರ್ಗ್ ಅಕ್ಯಾಡೆಮಿ
description
Engineering Academy ಕೇವಲ ಒಂದು ತರಬೇತಿಯಲ್ಲ; ಇದು ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯ ಮಟ್ಟದ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಅಥವಾ ಅಪ್ರೆಂಟಿಸ್‌ಶಿಪ್‌ನಂತಹ ಉನ್ನತ ವೃತ್ತಿಪರ ಹಂತಗಳಿಗೆ ಸಿದ್ಧಪಡಿಸುವ ಒಂದು ಮಹತ್ವದ ವೇದಿಕೆ. ಇಲ್ಲಿ GE Aerospace ಮತ್ತು GE Vernova ಸ್ವಯಂಸೇವಕರು ಹಾಗೂ Next Engineers ಸಮುದಾಯ ಪಾಲುದಾರರು ಶಾಲಾ ಸಮಯದ ಹೊರತಾಗಿ ವಿದ್ಯಾರ್ಥಿಗಳೊಂದಿಗೆ ಆಪ್ತವಾಗಿ ಕೆಲಸ ಮಾಡುತ್ತಾರೆ. ತಂಡಗಳಲ್ಲಿ ಕಾರ್ಯನಿರ್ವಹಿಸುವ ವಿದ್ಯಾರ್ಥಿಗಳು, ಹಂತಹಂತವಾಗಿ ಕಠಿಣವಾಗುವ ವಿನ್ಯಾಸದ ಸವಾಲುಗಳನ್ನು ಎದುರಿಸುವ ಮೂಲಕ ಇಂಜಿನಿಯರಿಂಗ್ ವಿನ್ಯಾಸ ಪ್ರಕ್ರಿಯೆಯ ಮರ್ಮವನ್ನು ಅರಿಯುತ್ತಾರೆ. ಇದರೊಂದಿಗೆ, ಸಂವಹನ ಕಲೆ, ಸಮಯ ನಿರ್ವಹಣೆ ಮತ್ತು ಪ್ರೆಸೆಂಟೇಶನ್‌ನಂತಹ ಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ, ಇದು ಅವರ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಡುತ್ತದೆ. ಅಷ್ಟೇ ಅಲ್ಲದೆ, ತಜ್ಞರೊಂದಿಗೆ ಸಂವಾದ ನಡೆಸುವ, ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಿಗೆ ಭೇಟಿ ನೀಡುವ ಮತ್ತು ನಾವೀನ್ಯತೆ ಕೇಂದ್ರಗಳನ್ನು ಹತ್ತಿರದಿಂದ ನೋಡುವ ಅಪರೂಪದ ಅವಕಾಶಗಳೂ ಇಲ್ಲಿವೆ.
 
Engineering Academy ಸಂಪೂರ್ಣ ಉಚಿತವಾಗಿದೆ. ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಮತ್ತು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
 
ವಿದ್ಯಾರ್ಥಿಗಳು ಈ ಅಕಾಡೆಮಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹೇಗೆ ಅರ್ಜಿ ಸಲ್ಲಿಸುವುದು ಪುಟಕ್ಕೆ ಹೋಗಿ. ಅರ್ಜಿ ಸಲ್ಲಿಸುವುದು ಸಂಪೂರ್ಣ ಉಚಿತ. ಅರ್ಜಿಯನ್ನು ಸಲ್ಲಿಸಲು ನಿಮ್ಮ ಸ್ಥಳದ ಪುಟಕ್ಕೆ ಭೇಟಿ ನೀಡಿ ಮತ್ತು ಪುಟದ ಬ್ಯಾನರ್‌ನಲ್ಲಿರುವ “ಅರ್ಜಿ ಸಲ್ಲಿಸಿ” ಲಿಂಕ್ ಅಥವಾ ಅಕಾಡೆಮಿ ವಿವರಣೆಯ ಪಕ್ಕದಲ್ಲಿರುವ ಬಟನ್ ಮೇಲೆ ಕ್ಲಿಕ್ ಮಾಡಿ.

ಹೇಗೆ ಅರ್ಜಿ ಸಲ್ಲಿಸುವುದು

2025ರಲ್ಲಿ, Engineering Academy ಹೊಸ ವಿದ್ಯಾರ್ಥಿಗಳನ್ನು ಓಹಿಯೋದ ಸಿನ್ಸಿನಾಟಿ ಮತ್ತು ಪೋಲೆಂಡ್‌ನ ವಾರ್ಸಾದಲ್ಲಿ ಮಾತ್ರ ದಾಖಲಿಸಿಕೊಳ್ಳಲಿದೆ. ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ (USA), ಯುನೈಟೆಡ್ ಕಿಂಗ್‌ಡಮ್‌ನ ಸ್ಟಾಫರ್ಧ್‌ಶೈರ್ ಅಥವಾ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಾವು ಈಗ ಹೊಸದಾಗಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುತ್ತಿಲ್ಲ. ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ ಇತರ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ನಿಮ್ಮ ಸ್ಥಳದ ಪುಟಕ್ಕೆ ಭೇಟಿ ನೀಡಿ.
 
 
ಸಿನ್ಸಿನಾಟಿ ಮೆಚ್ಚುಗೆ ಮಾತುಗಳು
ಗ್ರೀನ್‌ವಿಲ್ ಮೆಚ್ಚುಗೆ ಮಾತುಗಳು
ಜೋಹಾನ್ಸ್‌ಬರ್ಗ್ ಮೆಚ್ಚುಗೆ ಮಾತುಗಳು
ಸಿನ್ಸಿನಾಟಿ ಮೆಚ್ಚುಗೆ ಮಾತುಗಳು
ಇನ್ನಷ್ಟು ತಿಳಿಯಲು ಆಸಕ್ತಿಯೇ?ನೀವು ನಮ್ಮ ಕಾರ್ಯಕ್ರಮದ ಸ್ಥಳಗಳಿಂದ ದೂರದಲ್ಲಿದ್ದರೂ ಅಥವಾ ಇಂಜಿನಿಯರಿಂಗ್ ಬಗ್ಗೆ ಅರಿಯಲು ಇನ್ನೂ ಹೆಚ್ಚಿನ ಹಂಬಲವಿದ್ದರೂ, Next Engineers: Challenge Yourself ಎಂಬುದರ ಮೂಲಕ ಮನೆಯಲ್ಲಿ ಮತ್ತು ತರಗತಿಗಳಲ್ಲಿ ಇಂಜಿನಿಯರಿಂಗ್ ಅನ್ವೇಷಣೆ ಮಾಡಲು ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಲಾಗುತ್ತದೆ.
 

ಪ್ರಭಾವ

Next Engineers ನ ಮೊದಲ ಮೂರು ವರ್ಷಗಳಲ್ಲಿ, Engineering Academy ಯು 528 ವಿದ್ಯಾರ್ಥಿಗಳನ್ನು ತಲುಪಿದೆ. GE Aerospace ಮತ್ತು GE Vernova ಸ್ವಯಂಸೇವಕರು ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಲು 2,000 ಕ್ಕೂ ಹೆಚ್ಚು ಗಂಟೆಗಳನ್ನು ವಿನಿಯೋಗಿಸಿದ್ದಾರೆ. ಇದರ ಫಲವಾಗಿ, ತಂಡ 1 ರ ಶೇ. 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಶಸ್ವಿಯಾಗಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿ, ಇಂಜಿನಿಯರಿಂಗ್ ಪದವಿ ಅಥವಾ ಅಪ್ರೆಂಟಿಸ್‌ಶಿಪ್‌ಗಳಿಗೆ ದಾಖಲಾಗಿದ್ದಾರೆ.
ಸಿನ್ಸಿನಾಟಿ
ತಂಡಗಳು ತಮ್ಮ ಗ್ಲೈಡರ್‌ಗಳನ್ನು ಪರೀಕ್ಷಿಸಿದವು

ವೈಮಾಂತರಿಕ್ಷದ ಸವಾಲಿನಲ್ಲಿ ತಮ್ಮ ಗ್ಲೈಡರ್‌ಗಳನ್ನು ಪರೀಕ್ಷಿಸುತ್ತಿರುವ ಸಿನ್ಸಿನಾಟಿಯ Engineering Academy ವಿನ್ಯಾಸ ತಂಡಗಳು.

ಇನ್ನಷ್ಟು ತಿಳಿಯಿರಿ
ಸಿನ್ಸಿನಾಟಿ ಅಕಾಡೆಮಿ
ವಾರ್ಸಾ
ಪೋಲೆಂಡ್‌ನ GE Aerospace ನಲ್ಲಿ ಹಾರಾಟದ ಭವಿಷ್ಯದ ಬಗ್ಗೆ ಅನ್ವೇಷಣೆ ನಡೆಸುತ್ತಿರುವ ಅಕಾಡೆಮಿ ವಿದ್ಯಾರ್ಥಿಗಳು.

GE Aerospace ಕ್ಯಾಂಪಸ್ ಪ್ರವಾಸವನ್ನು ಆನಂದಿಸುತ್ತಾ, ಅಲ್ಲಿನ ಇಂಜಿನಿಯರ್‌ಗಳೊಂದಿಗೆ ಸಂವಹನ ನಡೆಸುತ್ತಿರುವ Engineering Academy ಯ ವಿದ್ಯಾರ್ಥಿಗಳು.

ಇನ್ನಷ್ಟು ತಿಳಿಯಿರಿ
ಅಕಾಡೆಮಿ ವಿದ್ಯಾರ್ಥಿ
ಜೊಹಾನ್ಸ್‌ಬರ್ಗ್
ತಂಡವು ತಮ್ಮ ಕಿರುಮಾದರಿಯನ್ನು ಹಂಚಿಕೊಳ್ಳುತ್ತಿದೆ
ಜೋಹಾನ್ಸ್‌ಬರ್ಗ್‌ನ ಇಂಜಿನಿಯರಿಂಗ್ ಅಕಾಡೆಮಿ ವಿನ್ಯಾಸ ತಂಡವು ಮಳೆನೀರು ಕೊಯ್ಲು ಸವಾಲಿಗಾಗಿ ತಾವು ಸಿದ್ಧಪಡಿಸಿದ ಕಿರುಮಾದರಿಯನ್ನು (ಪ್ರೋಟೋಟೈಪ್‌) ಪ್ರದರ್ಶಿಸುತ್ತಿದೆ.
ಇನ್ನಷ್ಟು ತಿಳಿಯಿರಿ
ಜೊಹಾನ್ಸ್‌ಬರ್ಗ್‌ ಅಕಾಡೆಮಿ
ಸ್ಟಾಫರ್ಡ್‌ಶೈರರ
ಜಲ ಶಕ್ತಿಯನ್ನು ಬಳಸಿಕೊಳ್ಳುವುದು

Engineering Academy ಸ್ಟಾಫರ್ಡ್‌ಶೈರ್ ವಿದ್ಯಾರ್ಥಿಗಳು ಜಲ ಶಕ್ತಿಯನ್ನು ಬಳಸಿಕೊಳ್ಳಲು ತಮ್ಮ ಕಿರು ಮಾದರಿಯನ್ನು ಒಟ್ಟಾಗಿ ನಿರ್ಮಿಸುತ್ತಿದ್ದಾರೆ.

ಇನ್ನಷ್ಟು ತಿಳಿಯಿರಿ
ಸ್ಟಾಫರ್ಡ್‌ಶೈರ್‌ ಅಕಾಡೆಮಿ
ಗ್ರೀನ್‌ವಿಲ್
ಲೈಫ್‌ ಪ್ಲಾನ್‌ಗಳನ್ನು ಮಾಡುವಿಕೆ
ಭವಿಷ್ಯದ ಗುರಿಗಳನ್ನು ನಿರ್ಧರಿಸಲು ಮತ್ತು ಅವುಗಳನ್ನು ಸಾಧಿಸುವ ಹಾದಿಯನ್ನು ಯೋಜಿಸಲು, ಗ್ರೀನ್‌ವಿಲ್, SC ನಗರದ Engineering Academy ವಿದ್ಯಾರ್ಥಿಗಳು ಕಾಲೇಜು ಮತ್ತು ವೃತ್ತಿಜೀವನದ ಸನ್ನದ್ಧತೆಯ ಚಟುವಟಿಕೆಯ ಭಾಗವಾಗಿ ತಮ್ಮ 'ಲೈಫ್‌ ಮ್ಯಾಪ್‌' ಅನ್ನು ಸಿದ್ಧಪಡಿಸುತ್ತಿದ್ದಾರೆ.
ಇನ್ನಷ್ಟು ತಿಳಿಯಿರಿ
ಲೈಫ್‌ ಮ್ಯಾಪ್‌ ಗ್ರೀನ್‌ವಿಲ್‌
Connect

Want to know more or how to get involved? Are you an aspiring engineer or do you know one? We want to hear from you. Send us your questions and follow us on social media:

Contact us: NextEngineers@fhi360.org

Follow GE Aerospace
Instagram LinkedIn X YouTube

Follow GE VERNOVA
Instagram LinkedIn X YouTube
A groups of students

Footer menu

  • ಬಗ್ಗೆ
  • Inspiration
  • Cities
  • ಸುದ್ದಿ

Footer secondary

  • ಬಳಕೆಯ ನಿಯಮಗಳು
  • ಗೌಪ್ಯತಾ ನೀತಿ
  • ಕುಕೀ ನೀತಿ
  • ಸಂಶೋಧನಾ ಅಧ್ಯಯನದ ಸೂಚನೆ
  • Next Engineers ಗೌಪ್ಯತಾ ಸೂಚನೆ
  • GE Aerospace
  • GE Vernova
© 2026 FHI360