Investing in today's youth
ಲೈಟ್ ಬಲ್ಬ್ ಐಕಾನ್
ಉತ್ತಮ ಜಗತ್ತನ್ನು ನಿರ್ಮಿಸುವುದು
ಇಂಜಿನಿಯರ್‌ಗಳು ಎಂದರೆ:
 
ಸಮಸ್ಯೆಗಳನ್ನು ಬಗೆಹರಿಸುವವರು. ಇಂಜಿನಿಯರ್‌ಗಳು ಸೇತುವೆಗಳು ಮತ್ತು ಬ್ಯಾಟರಿಗಳಿಂದ ಹಿಡಿದು ಜೆಟ್ ಇಂಜಿನ್ ಮತ್ತು ಸೌರ ಫಲಕಗಳವರೆಗೆ ಎಲ್ಲವನ್ನೂ ವಿನ್ಯಾಸಗೊಳಿಸುತ್ತಾರೆ. ವಿದ್ಯುತ್ ಸಂಪರ್ಕ ಕಲ್ಪಿಸುವುದಿರಲಿ, ನಮ್ಮ ಆರೋಗ್ಯ ರಕ್ಷಣೆ ಮಾಡುವುದಿರಲಿ ಅಥವಾ ನಮ್ಮನ್ನು ಪರಸ್ಪರ ಸಂಪರ್ಕದಲ್ಲಿರಿಸುವುದಿರಲಿ, ಇಂಜಿನಿಯರ್‌ಗಳು ಮಾಡುವ ಕೆಲಸವು ಎಲ್ಲರಿಗೂ ಅತ್ಯಗತ್ಯವಾಗಿದೆ.
 
ಉತ್ಸಾಹ ಮತ್ತು ಉದ್ದೇಶದಿಂದ ಪ್ರೇರಿತರಾದವರು. ಸ್ವಚ್ಛ ಇಂಧನದಿಂದ ಹಿಡಿದು ಗುಣಮಟ್ಟದ ಆರೋಗ್ಯ ಸೇವೆ ಮತ್ತು ಹೆಚ್ಚು ಸುಸ್ಥಿರ ವಿಮಾನಯಾನದವರೆಗೆ, ವಿಶ್ವದ ಅತ್ಯಂತ ಕಠಿಣ ಸವಾಲುಗಳಿಗೆ ಸ್ಪಂದಿಸಲು ಇಂಜಿನಿಯರ್‌ಗಳು ತಮ್ಮ ಕೌಶಲ್ಯಗಳನ್ನು ಬಳಸುತ್ತಾರೆ. ಇಂಜಿನಿಯರ್‌ಗಳು ಈ ಪ್ರಪಂಚದ ಭವಿಷ್ಯವನ್ನು ಇನ್ನಷ್ಟು ಉತ್ತಮಗೊಳಿಸುತ್ತಾರೆ.
 
ಹೆಚ್ಚಿನ ಬೇಡಿಕೆಯಲ್ಲಿರುವವರು. ಜಾಗತಿಕವಾಗಿ ಶೇ. 54 ರಷ್ಟು ಕಂಪನಿಗಳು ಪ್ರತಿಭೆಗಳ ಕೊರತೆಯನ್ನು ವರದಿ ಮಾಡುತ್ತಿವೆ. ಇಂಜಿನಿಯರ್ ಆಗುವುದರಿಂದ ಸ್ಥಿರವಾದ ಮತ್ತು ಉತ್ತಮ ವೇತನದ ವೃತ್ತಿಜೀವನವು ದೊರೆಯುತ್ತದೆ. Next Engineers ಕಾರ್ಯಕ್ರಮವು ಭವಿಷ್ಯದ ಇಂತಹ ಅವಕಾಶಗಳನ್ನು ಪಡೆಯಲು ಒಂದು ಹೆಬ್ಬಾಗಿಲಾಗಿದೆ.
 
ವಿಶಿಷ್ಟರಾಗಿರುತ್ತಾರೆ. ವೈವಿಧ್ಯಮಯ ದೃಷ್ಟಿಕೋನಗಳನ್ನು ಹೊಂದಿರುವ ಇಂಜಿನಿಯರ್‌ಗಳು ಒಗ್ಗೂಡಿದಾಗ, ಸಂಕೀರ್ಣ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತಾರೆ.
ಮಾದರಿ ಗಾಳಿಯಂತ್ರಗಳ ಎದುರು ಮೇಜಿನ ಕಡೆಗೆ ಒರಗಿರುವ ನಗುಮುಖದ ಮಹಿಳೆ
ಇಂಜಿನಿಯರ್ ಅನುಭವದ ಮಾತು

GE Next Engineers
GE Aerospace ನಲ್ಲಿ ಟೆಸ್ಟ್ ಇಂಜಿನಿಯರ್ ಆಗಿರುವ ಅಲಿಶಾ ಡೇವಿಸ್-ಕೆಂಟ್ GE Next Engineers ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ, ತಮ್ಮ ಪ್ರೌಢಶಾಲೆಯಲ್ಲಿ ವೃತ್ತಿಜೀವನದ ಹಾದಿಯನ್ನು ನಿರ್ಧರಿಸುವಾಗ ಇಂತಹ ಒಂದು ಪ್ರೋಗ್ರಾಂ ಇದ್ದಿದ್ದರೆ ತಮಗೆ ಎಷ್ಟು ಸಹಾಯವಾಗುತ್ತಿತ್ತು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ.

ನಾವು ಹಾರಲೆಂದೇ ಹುಟ್ಟಿದವರು
GEnx ಎಂಜಿನ್, ಕಲ್ಪನೆಯಿಂದ ಸಾಕಾರದವರೆಗೆ

ಪೋಲೆಂಡ್‌ನಲ್ಲಿ GE Aerospace ಇಂಜಿನಿಯರ್‌
ಪೋಲೆಂಡ್‌ನ ಇಂಜಿನಿಯರ್‌ಗಳಿಗೆ ತಮ್ಮ ಆಲೋಚನೆಗಳು ಸಾಕಾರಗೊಳ್ಳುತ್ತಿರುವುದು ಪ್ರತಿ ದಿನ ಕಾಣಿಸುತ್ತಿದೆ
ಇಂಜಿನಿಯರಿಂಗ್‌ ವೃತ್ತಿಗಳು
ಇಂಜಿನಿಯರ್‌ಗಳು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಾರೆ! ಕೆಲವು ಉದಾಹರಣೆಯನ್ನು ಇಲ್ಲಿ ನೀಡಲಾಗಿದೆ:

ವೃತ್ತಿಜೀವನದ ವಿವರ
ಕೆಮಿಕಲ್‌ ಇಂಜಿನಿಯರಿಂಗ್ ಎಂದರೇನು?
ವೃತ್ತಿಜೀವನದ ವಿವರ
ಏರೋಸ್ಪೇಸ್ ಇಂಜಿನಿಯರಿಂಗ್ ಎಂದರೇನು?

ವೃತ್ತಿಜೀವನದ ವಿವರ
ಬಯೋಮೆಡಿಕಲ್ ಇಂಜಿನಿಯರಿಂಗ್ ಎಂದರೇನು?

ವೃತ್ತಿಜೀವನದ ವಿವರ
ಮೈನಿಂಗ್ ಇಂಜಿನಿಯರಿಂಗ್‌ ಎಂದರೇನು?

ವೃತ್ತಿಜೀವನದ ವಿವರ
ಮೆಕ್ಯಾಟ್ರೋನಿಕ್ಸ್ ಇಂಜಿನಿಯರಿಂಗ್‌ ಎಂದರೇನು?

ವೃತ್ತಿಜೀವನದ ವಿವರ
ಮೆಕ್ಯಾನಿಕಲ್ ಇಂಜಿನಿಯರಿಂಗ್‌ ಎಂದರೇನು?

ವೃತ್ತಿಜೀವನದ ವಿವರ
ಕಂಪ್ಯೂಟರ್ ಇಂಜಿನಿಯರಿಂಗ್‌ ಎಂದರೇನು?

ವೃತ್ತಿಜೀವನದ ವಿವರ
ಸಿವಿಲ್‌ ಇಂಜಿನಿಯರಿಂಗ್‌ ಎಂದರೇನು?

ವೃತ್ತಿಜೀವನದ ವಿವರ
ಮೆಟೀರಿಯಲ್ಸ್ ಇಂಜಿನಿಯರಿಂಗ್‌ ಎಂದರೇನು?

ವೃತ್ತಿಜೀವನದ ವಿವರ
ಇಲೆಕ್ಟ್ರಿಕಲ್ ಇಂಜಿನಿಯರಿಂಗ್‌ ಎಂದರೇನು?

ವೃತ್ತಿಜೀವನದ ವಿವರ
ಇಂಡಸ್ಟ್ರಿಯಲ್‌ ಇಂಜಿನಿಯರಿಂಗ್‌ ಎಂದರೇನು?

ವೃತ್ತಿಜೀವನದ ವಿವರ
ಎನರ್ಜಿ ಇಂಜಿನಿಯರಿಂಗ್‌ ಎಂದರೇನು?
ಕಾರ್ಯನಿರತ ಇಂಜಿನಿಯರಿಂಗ್‌
ಇಂಜಿನಿಯರ್‌ಗಳು ಹೇಗೆ ತಮ್ಮ ಅದ್ಭುತ ಕಲ್ಪನೆಗಳಿಗೆ ಜೀವ ತುಂಬುತ್ತಾರೆ ಮತ್ತು ಆ ಮೂಲಕ ಈ ಜಗತ್ತನ್ನೇ ಹೇಗೆ ಬದಲಿಸುತ್ತಾರೆ ಎಂಬುದನ್ನು ಇಲ್ಲಿ ನೋಡಿ.

ವಿಂಡ್‌ ಟರ್ಬೈನ್‌ ಇಂಜಿನಿಯರ್‌ನ ಬದುಕಿನಲ್ಲಿನ ಒಂದು ದಿನ
ಬ್ರಾಡ್‌ಕಾಸ್ಟ್ ಮೀಡಿಯಾ ಸರ್ವಿಸ್ ನಿರ್ಮಿಸಿದ ಈ ಕಿರುಚಿತ್ರವು, ವಿಶ್ವದ ಅತಿದೊಡ್ಡ ಕಡಲಾಚೆಯ ವಿಂಡ್ ಫಾರ್ಮ್ ಆಗಿದ್ದ 'ಲಂಡನ್ ಅರೇ' ಯಲ್ಲಿ ಕಾರ್ಯನಿರ್ವಹಿಸುವ ವಿಂಡ್ ಟರ್ಬೈನ್ ಇಂಜಿನಿಯರ್ ಒಬ್ಬರ ಸಾಹಸಮಯ ದಿನಚರಿಯನ್ನು ಅದ್ಭುತವಾಗಿ ಕಟ್ಟಿಕೊಟ್ಟಿದೆ.

ಉತ್ಪಾದನಾ ವಲಯದಲ್ಲಿ 3D ಪ್ರಿಂಟಿಂಗ್ ತಂತ್ರಜ್ಞಾನವು ಈಗ 'ಸೂಪರ್‌ಸೋನಿಕ್' ವೇಗದಲ್ಲಿ ಅಂದರೆ ಶಬ್ದದ ವೇಗಕ್ಕಿಂತಲೂ ಮಿಗಿಲಾದ ವೇಗದಲ್ಲಿ ಮುನ್ನುಗ್ಗುತ್ತಿದೆ!
ಸ್ಟ್ರಾಟಸಿಸ್ ಸಂಸ್ಥೆಯ ಸಿಇಒ ಡಾ. ಯೋವ್ ಜೀಫ್ ಮತ್ತು ಬೂಮ್ ಸೂಪರ್ ಸೋನಿಕ್ ಸಂಸ್ಥೆಯ ಸಿಇಒ ಬ್ಲೇಕ್ ಶಾಲ್ ಅವರು ಬೂಮ್‌ನ ಕೊಲೊರಾಡೋ ಸೌಲಭ್ಯದಲ್ಲಿ ಭೇಟಿಯಾಗಿ, XB-1 ಪರೀಕ್ಷಾರ್ಥ ವಿಮಾನದ ಮೊದಲ ಹಾರಾಟದ ಸಿದ್ಧತೆಯನ್ನು ವೀಕ್ಷಿಸಿದರು.

ಡ್ರೀಮ್‌ ಬಿಗ್‌ - ಮಹಿಳಾ ಇಂಜಿನಿಯರ್‌ಗಳನ್ನು ಭೇಟಿ ಮಾಡಿ
ಸಣ್ಣ ಮತ್ತು ಬೃಹತ್ ಇಂಜಿನಿಯರಿಂಗ್ ಅದ್ಭುತಗಳ ಹಿಂದೆ ಅಡಗಿರುವ ಮಾನವನ ಅಪ್ರತಿಮ ಸೃಜನಶೀಲತೆಯನ್ನು ಡ್ರೀಮ್ ಬಿಗ್ ಸಂಭ್ರಮಿಸುತ್ತದೆ. ಅಷ್ಟೇ ಅಲ್ಲದೆ, ಇಂಜಿನಿಯರ್‌ಗಳು ಆವಿಷ್ಕಾರದ ಮಿತಿಗಳನ್ನು ಅನಿರೀಕ್ಷಿತ ಹಾಗೂ ಅದ್ಭುತ ರೀತಿಯಲ್ಲಿ ಹೇಗೆ ವಿಸ್ತರಿಸುತ್ತಾರೆ ಎಂಬುದನ್ನು ಇದು ಕಣ್ಣಮುಂದೆ ತರುತ್ತದೆ.

ಫಾರ್ಮುಲಾ 1 (F1) ರೇಸಿಂಗ್ ಲೋಕದಲ್ಲಿ ಮಹಿಳಾ ಇಂಜಿನಿಯರ್ ಆಗಿ ಕೆಲಸ ಮಾಡುವುದು ಹೇಗಿರುತ್ತದೆ?
ಅಂತರಾಷ್ಟ್ರೀಯ ಮಹಿಳಾ ಇಂಜಿನಿಯರಿಂಗ್ ದಿನದಂದು, Visa Cash App RB F1 ತಂಡವು ರೇಸಿಂಗ್ ಟ್ರ್ಯಾಕ್ ಒಳಗೆ ಮತ್ತು ಹೊರಗೆ ಸಾಧನೆಗೈಯುತ್ತಿರುವ ತನ್ನ ಮಹಿಳಾ ಇಂಜಿನಿಯರ್‌ಗಳನ್ನು ಸಂಭ್ರಮಿಸುತ್ತಿದೆ. ಈ ಬೆಳೆಯುತ್ತಿರುವ ತಂಡದ ಕೆಲವು ಸ್ಪೂರ್ತಿದಾಯಕ ಸಾಧಕಿಯರ ಪರಿಚಯ ಇಲ್ಲಿದೆ.

F1 ಲೋಕದಲ್ಲಿ ನನ್ನ ವೃತ್ತಿ: ರೇಚಲ್ | ಮೆಟೀರಿಯಲ್ ಸೈನ್ಸ್ ಇಂಜಿನಿಯರ್
ಮೆಟೀರಿಯಲ್ ಸೈನ್ಸ್ ಇಂಜಿನಿಯರ್ ರೇಚಲ್ ಅವರ ಪರಿಚಯ ಇಲ್ಲಿದೆ! ಲ್ಯಾಬ್ ವಿಶ್ಲೇಷಣೆಯಿಂದ ಹಿಡಿದು ಟ್ರ್ಯಾಕ್ ಸಮಸ್ಯೆಗಳ ತನಿಖೆಯವರೆಗೆ, ವಿವಿಧ ವಸ್ತುಗಳ ಗರಿಷ್ಠ ಸಾಮರ್ಥ್ಯವನ್ನು ಹೊರತೆಗೆಯುವುದೇ ಇವರ ತಂಡದ ಮುಖ್ಯ ಉದ್ದೇಶ. ಇಂಜಿನಿಯರಿಂಗ್ ಲೋಕದ ಈ ಸಾಧಕಿಯ ಕಥೆ ಇಲ್ಲಿದೆ.