ನೋಟಿಸ್ ದಿನಾಂಕ: ನವೆಂಬರ್ 27, 2024

GE NEXT ENGINEERS ದತ್ತಾಂಶ ಗೌಪ್ಯತಾ ನೋಟಿಸ್

ಈ ಗೌಪ್ಯತಾ ನೋಟಿಸ್, Next Engineers ಪ್ರೋಗ್ರಾಂನಲ್ಲಿ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ FHI 360, GE Aerospace, GE Vernova, ಮತ್ತು GE Aerospace Foundation (ದತ್ತಾಂಶ ನಿಯಂತ್ರಕರು) ನಿಮ್ಮಿಂದ ಸಂಗ್ರಹಿಸುವ ಅಥವಾ ಪ್ರಕ್ರಿಯೆಗೊಳಿಸುವ ಎಲ್ಲಾ ವೈಯಕ್ತಿಕ ಮಾಹಿತಿಗೆ ಅನ್ವಯಿಸುತ್ತದೆ. ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಬಗ್ಗೆ ಹೆಚ್ಚಿನದನ್ನು ಕಲಿಯಲು ಅವಕಾಶಗಳನ್ನು ಒದಗಿಸುವುದು ಮತ್ತು ಈ ಅವಕಾಶಗಳ ಪರಿಣಾಮಕಾರಿಯಾದ ಮೌಲ್ಯಮಾಪನ ಮಾಡುವುದು ಈ ಪ್ರೋಗ್ರಾಂನ ಉದ್ದೇಶವಾಗಿದೆ.

ಭಾವಿ ವಿದ್ಯಾರ್ಥಿಗಳು, ಅರ್ಜಿದಾರರು, ಭಾಗವಹಿಸುವವರು ಮತ್ತು ಪೋಷಕರಿಗಾಗಿ, Next Engineers ಆಸಕ್ತಿ ಫಾರ್ಮ್‌ಗಳು, ನಿಮ್ಮ ಅರ್ಜಿ ನಮೂನೆಗಳು ಮತ್ತು Next Engineers ಭಾಗವಹಿಸುವಿಕೆಯ ಫಾರ್ಮ್‌ಗಳ ಮೂಲಕ ನಿಮ್ಮ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಮಾಹಿತಿಯು ಸಂಪರ್ಕ ಮಾಹಿತಿ, ಜನಸಂಖ್ಯಾ ವಿವರಗಳು, ಶೈಕ್ಷಣಿಕ ಮಾಹಿತಿ, ಆಸಕ್ತಿಗಳು, ಚಟುವಟಿಕೆಗಳು ಮತ್ತು ಆದ್ಯತೆಗಳಂತಹ ವೈಯಕ್ತಿಕ ವಿವರಗಳನ್ನು ಒಳಗೊಂಡಿರುತ್ತದೆ.

ಆಸಕ್ತಿ ಫಾರ್ಮ್, ಪ್ರೋಗ್ರಾಂ ಅಪ್ಲಿಕೇಶನ್ ಮತ್ತು/ಅಥವಾ ಪ್ರೋಗ್ರಾಂ ದೃಢೀಕರಣ ಫಾರ್ಮ್ ಮೂಲಕ ನಮಗೆ ನೀಡಲಾದ ಮಾಹಿತಿಯೊಂದಿಗೆ ನಿಮ್ಮ ಹೆಸರನ್ನು ಸೇರಿಸಲಾಗುತ್ತದೆ. ಭಾಗವಹಿಸುವವರಿಗಾಗಿ, Next Engineers ಚಟುವಟಿಕೆಗಳಲ್ಲಿ ನಿಮ್ಮ ಹಾಜರಾತಿಯನ್ನು ಗಮನಿಸಲು ನಿಮ್ಮ ಹೆಸರನ್ನು ಬಳಸಲಾಗುತ್ತದೆ. ಉಳಿದ ಎಲ್ಲಾ ಪ್ರೋಗ್ರಾಂ ದತ್ತಾಂಶಗಳಿಗಾಗಿ, ನಾವು ಪಡೆಯುವ ಮಾಹಿತಿಯಿಂದ ನಿಮ್ಮ ಹೆಸರನ್ನು ತೆಗೆದುಹಾಕಲಾಗುತ್ತದೆ ಮತ್ತು ಬದಲಿಗೆ ಸಂಖ್ಯಾತ್ಮಕ ಕೋಡ್ ಮೂಲಕ ಲಿಂಕ್ ಮಾಡಲಾಗುತ್ತದೆ. ನಿಮ್ಮ ಸಂದರ್ಶನಗಳು ಅಥವಾ ಇತರ ಸೆಶನ್‌ಗಳನ್ನು ರೆಕಾರ್ಡ್ ಮಾಡಲು ಅಥವಾ ನಿಮ್ಮ ಫೋಟೋ ಅಥವಾ ವೀಡಿಯೊಗಳನ್ನು ಬಳಸಲು ನಿಮ್ಮ ಅನುಮತಿಯನ್ನು ಕೇಳಬಹುದು, ಆದರೆ ಇವುಗಳು ಐಚ್ಛಿಕವಾಗಿರುತ್ತದೆ.

ಸ್ವಯಂಸೇವಕರು ಮತ್ತು ಸ್ಥಳೀಯ ಸಮುದಾಯ ಪಾಲುದಾರರಿಗಾಗಿ, ಸಂವಹನವನ್ನು ಸುಲಭಗೊಳಿಸಲು, Next Engineers ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯನ್ನು ದಾಖಲಿಸಲು ಮತ್ತು Next Engineers ಚಟುವಟಿಕೆಗಳನ್ನು ಸುಧಾರಿಸುವ ಉದ್ದೇಶದಿಂದ ನಿಮ್ಮ ಹೆಸರು, ಇಮೇಲ್, ಸಂಪರ್ಕ ಮಾಹಿತಿ ಮತ್ತು ಸಮೀಕ್ಷೆಗಳ ಮೇಲಿನ ನಿಮ್ಮ ಪ್ರತಿಕ್ರಿಯೆಗಳಂತಹ ಮಾಹಿತಿಯನ್ನು ನಾವು ನೇರವಾಗಿ ನಿಮ್ಮಿಂದ ಸಂಗ್ರಹಿಸಬಹುದು.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಪ್ರಕ್ರಿಯೆಗೊಳಿಸಲು ಕಾನೂನುಬದ್ಧ ಆಧಾರಗಳು ಈ ಕೆಳಗಿನಂತಿವೆ:

  • ವಿದ್ಯಾರ್ಥಿಗಳಿಗೆ ಈ ಪ್ರೋಗ್ರಾಂ ಅನ್ನು ಒದಗಿಸುವಲ್ಲಿ ಮತ್ತು ಪ್ರೋಗ್ರಾಂ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮತ್ತು ಹೆಚ್ಚಿನ ವಿದ್ಯಾರ್ಥಿಗಳಿಗೆ ಇಂತಹ ಅವಕಾಶಗಳನ್ನು ನೀಡಲು ನಮಗೆ ಸಹಾಯ ಮಾಡುವ ಮಾಹಿತಿಯನ್ನು ಸಂಗ್ರಹಿಸುವಲ್ಲಿನ ನಮ್ಮ ಕಾನೂನುಬದ್ಧ ಆಸಕ್ತಿ;
  • ವೀಡಿಯೊಗಳು ಮತ್ತು ಛಾಯಾಚಿತ್ರಗಳಂತಹ ಕೆಲವು ವಿಶೇಷ ರೀತಿಯ ಮಾಹಿತಿಯನ್ನು ಸಂಗ್ರಹಿಸಲು ನಿಮ್ಮ ಒಪ್ಪಿಗೆ;
  • ಆರ್ಕೈವಿಂಗ್ (ದಾಖಲೆ ನಿರ್ವಹಣೆ), ಸಂಶೋಧನೆ ಮತ್ತು ಸಾಂಖ್ಯಿಕ ಉದ್ದೇಶಗಳು.

 

ನಿಮ್ಮ ದತ್ತಾಂಶವನ್ನು Next Engineers ಕೊನೆಗೊಂಡ ನಂತರ ಐದು (5) ವರ್ಷಗಳವರೆಗೆ ಬಳಸಲಾಗುತ್ತದೆ ಮತ್ತು/ಅಥವಾ ಸಂಗ್ರಹಿಸಿ ಇರಿಸಲಾಗುತ್ತದೆ.

ನಿಮ್ಮ ಹಕ್ಕುಗಳು

ನಿಮ್ಮ ವ್ಯಾಪ್ತಿಯ ಕಾನೂನಿನ ಅಡಿಯಲ್ಲಿ ಒದಗಿಸಲಾದ ಮಟ್ಟಿಗೆ, ನೀವು ಈ ಕೆಳಗಿನ ಹಕ್ಕುಗಳನ್ನು ಹೊಂದಿರಬಹುದು:

  • ನಾವು ಪ್ರಕ್ರಿಯೆಗೊಳಿಸುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸುವ ಮತ್ತು ಆ ಪ್ರಕ್ರಿಯೆಯ ವಿವರಗಳನ್ನು ವಿನಂತಿಸುವ ಹಕ್ಕು;
  • ನಿಮ್ಮ ವೈಯಕ್ತಿಕ ಮಾಹಿತಿಯನ್ನು ನವೀಕರಿಸಲು, ಸರಿಪಡಿಸಲು, ತಿದ್ದುಪಡಿ ಮಾಡಲು, ಅಳಿಸಲು ಅಥವಾ ನಿರ್ಬಂಧಿಸಲು ವಿನಂತಿಸುವ ಹಕ್ಕು;
  • ದತ್ತಾಂಶದ ಪೋರ್ಟಬಿಲಿಟಿ ವಿನಂತಿಸುವ ಹಕ್ಕು;
  • ನಿಮ್ಮ ಸ್ಥಳೀಯ ದತ್ತಾಂಶ ಸಂರಕ್ಷಣಾ ಪ್ರಾಧಿಕಾರಕ್ಕೆ ದೂರು ಸಲ್ಲಿಸುವ ಹಕ್ಕು.

 

ಒಪ್ಪಿಗೆಯನ್ನು ಹಿಂಪಡೆಯುವುದು

ಕಾನೂನಿನಲ್ಲಿ ಅವಕಾಶವಿರುವಲ್ಲಿ, ನೀವು ಹಿಂದೆ ನಮಗೆ ನೀಡಿದ ಒಪ್ಪಿಗೆಯನ್ನು ಹಿಂಪಡೆಯಬಹುದು ಅಥವಾ ಯಾವುದೇ ಸಮಯದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯ ಪ್ರಕ್ರಿಯೆಗೆ ಆಕ್ಷೇಪಿಸಬಹುದು ಮತ್ತು ನಿಮ್ಮ ಆದ್ಯತೆಗಳನ್ನು ನಾವು ಮುಂದುವರಿಸುತ್ತೇವೆ. ನಿಮ್ಮ ಹಿಂಪಡೆಯುವಿಕೆಯು, ಅದಕ್ಕಿಂತ ಮೊದಲು ನಡೆದ ದತ್ತಾಂಶ ಪ್ರಕ್ರಿಯೆಯ ಕಾನೂನುಬದ್ಧತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಭದ್ರತೆ

ನಾವು ಪ್ರಕ್ರಿಯೆಗೊಳಿಸುವ ವೈಯಕ್ತಿಕ ಮಾಹಿತಿಯ ಅಪಾಯಕ್ಕೆ ಅನುಗುಣವಾಗಿ ಸುರಕ್ಷತೆಯ ಮಟ್ಟವನ್ನು ಖಚಿತಪಡಿಸಿಕೊಳ್ಳಲು ನಾವು ತಾಂತ್ರಿಕ ಮತ್ತು ಸಾಂಸ್ಥಿಕ ಕ್ರಮಗಳನ್ನು ಜಾರಿಗೆ ತರುತ್ತೇವೆ. ಈ ಕ್ರಮಗಳು ವೈಯಕ್ತಿಕ ಮಾಹಿತಿಯ ನಿರಂತರ ಸಮಗ್ರತೆ ಮತ್ತು ಗೌಪ್ಯತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿವೆ. ಪ್ರಕ್ರಿಯೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಈ ಕ್ರಮಗಳನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡುತ್ತೇವೆ. ಜಾರಿಯಲ್ಲಿರುವ ಸೂಕ್ತ ರಕ್ಷಣೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಇಮೇಲ್ ವಿಳಾಸದಲ್ಲಿ ನಮ್ಮನ್ನು ಸಂಪರ್ಕಿಸಿ.

ದತ್ತಾಂಶ ನಿಲುಕಿಸಿಕೊಳ್ಳುವುದು ಮತ್ತು ದತ್ತಾಂಶ ವರ್ಗಾವಣೆ

FHI 360 ಅಮೆರಿಕದಲ್ಲಿದೆ ಮತ್ತು ಆದ್ದರಿಂದ, ನಿಮ್ಮ ಅಪ್ಲಿಕೇಶನ್ ಮಾಹಿತಿಯಂತಹ ನೀವು ಒದಗಿಸುವ ಕೆಲವು ಮಾಹಿತಿಯನ್ನು ಅಮೆರಿಕದಲ್ಲಿರುವ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಕೇವಲ FHI 360 ಮತ್ತು ನಿಮ್ಮ ಸ್ಥಳೀಯ ಪ್ರೋಗ್ರಾಂ ಅನ್ನು ಅನುಷ್ಠಾನಗೊಳಿಸುತ್ತಿರುವ ನಿಮ್ಮ ದೇಶ ಅಥವಾ ರಾಜ್ಯದ ಪಾಲುದಾರ ಸಂಸ್ಥೆಗೆ ಮಾತ್ರ ನಿಮ್ಮ ಗುರುತನ್ನು ತಿಳಿಯುವ ರೀತಿಯಲ್ಲಿ (ಉದಾಹರಣೆಗೆ, ನಿಮ್ಮ ಹೆಸರಿನೊಂದಿಗೆ ಸಂಪರ್ಕ ಹೊಂದಿದ ಮಾಹಿತಿ) ಈ ದತ್ತಾಂಶವನ್ನು ನಿಲುಕಿಸಿಕೊಳ್ಳಲು ಅವಕಾಶವಿರುತ್ತದೆ.

ನಿಮ್ಮ ದತ್ತಾಂಶವನ್ನು ನಿಮ್ಮ ದೇಶದ ಹೊರಗಿನ ನಮ್ಮ ಪಾಲುದಾರರೊಂದಿಗೆ ಬಳಸಬಹುದು ಮತ್ತು ಹಂಚಿಕೊಳ್ಳಬಹುದು, ಆದರೆ ಹಂಚಿಕೊಳ್ಳುವ ಮೊದಲು ಅದರಿಂದ ನಿಮ್ಮ ಗುರುತನ್ನು ತೆಗೆದುಹಾಕಲಾಗುತ್ತದೆ. ಅಂದರೆ ನಿಮ್ಮ ಹೆಸರು ಮತ್ತು ಸಂಪರ್ಕ ಮಾಹಿತಿಯು ನಿಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಸಂಪರ್ಕ ಹೊಂದಿರುವುದಿಲ್ಲ, ಬದಲಿಗೆ ಅದನ್ನು ಕೋಡ್ ಮಾಡಲಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಿಮ್ಮ ಹೆಸರು, ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಇತರ ದೇಶಗಳು ಅಥವಾ ರಾಜ್ಯಗಳ ಪಾಲುದಾರರೊಂದಿಗೆ ಎಂದಿಗೂ ಹಂಚಿಕೊಳ್ಳಲಾಗುವುದಿಲ್ಲ. ಕೇವಲ FHI 360 ಮತ್ತು ನಿಮ್ಮ ದೇಶ ಅಥವಾ ರಾಜ್ಯದಲ್ಲಿರುವ ಪಾಲುದಾರರು ಮಾತ್ರ ಆ ದತ್ತಾಂಶವನ್ನು ನಿಲುಕಿಸಿಕೊಳ್ಳಬಹುದು.

ನಿಮ್ಮ ದೇಶದ ಹೊರಗಿನ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಲಾದ ಯಾವುದೇ ಗುರುತಿಸಬಹುದಾದ ಅಥವಾ ಕೋಡ್ ಮಾಡಲಾದ ವೈಯಕ್ತಿಕ ಮಾಹಿತಿಯನ್ನು ಅನ್ವಯವಾಗುವ ದತ್ತಾಂಶ ಸಂರಕ್ಷಣಾ ಕಾನೂನುಗಳಿಗೆ ಅನುಗುಣವಾಗಿ ನಿರ್ವಹಿಸಲಾಗುತ್ತದೆ. ಆ ದೇಶಗಳಲ್ಲಿನ ದತ್ತಾಂಶ ಗೌಪ್ಯತೆ ಮತ್ತು ರಕ್ಷಣೆಯು ನಿಮ್ಮ ಸ್ವಂತ ದೇಶದಲ್ಲಿರುವಂತಹ ಮಟ್ಟದ ರಕ್ಷಣೆಯನ್ನು ನೀಡದಿರಬಹುದು, ಆದರೆ ನಾವು ಪ್ರಮಾಣಿತ ಒಪ್ಪಂದದ ಷರತ್ತುಗಳಂತಹ ದೇಶ-ನಿರ್ದಿಷ್ಟ ಕಾರ್ಯವಿಧಾನಗಳನ್ನು ಬಳಸಿ ದತ್ತಾಂಶವನ್ನು ವರ್ಗಾಯಿಸುತ್ತೇವೆ.

ಸಂಪರ್ಕ ಮಾಹಿತಿ

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಿದ ವಿಧಾನದ ಬಗ್ಗೆ ನಿಮಗೆ ಪ್ರಶ್ನೆಗಳಿದ್ದರೆ ಅಥವಾ ಕಳಕಳಿ ಇದ್ದರೆ, ಅಥವಾ ನಿಮ್ಮ ಹಕ್ಕು ಚಲಾಯಿಸಲು ಅಥವಾ ಒಪ್ಪಿಗೆಯನ್ನು ಹಿಂಪಡೆಯಲು ಬಯಸಿದರೆ, ದಯವಿಟ್ಟು FHI ದತ್ತಾಂಶ ಗೌಪ್ಯತಾ ಅಧಿಕಾರಿಯನ್ನು privacy@fhi360.org ಮೂಲಕ ಸಂಪರ್ಕಿಸಿ.

ನೋಟಿಸ್‌ನಲ್ಲಿನ ಬದಲಾವಣೆಗಳು

ಮೇಲೆ ತಿಳಿಸಲಾದ ಸಂಪರ್ಕ ವಿವರಗಳನ್ನು ಬಳಸಿಕೊಂಡು ನೀವು ಈ ಗೌಪ್ಯತಾ ನೋಟಿಸ್‌ನ ಪ್ರತಿಯನ್ನು ನಮ್ಮಿಂದ ವಿನಂತಿಸಬಹುದು. ನಾವು ಕಾಲಕಾಲಕ್ಕೆ ಈ ಗೌಪ್ಯತಾ ನೋಟಿಸ್ ಅನ್ನು ಮಾರ್ಪಡಿಸಬಹುದು ಅಥವಾ ನವೀಕರಿಸಬಹುದು. ನಾವು ಕೊನೆಯದಾಗಿ ಗೌಪ್ಯತಾ ನೋಟಿಸ್ ಅನ್ನು ಯಾವಾಗ ನವೀಕರಿಸಿದ್ದೇವೆ ಎಂಬುದನ್ನು ನೀವು ನೋಡಬಹುದು ಏಕೆಂದರೆ ನಾವು ಪರಿಷ್ಕರಣೆ ದಿನಾಂಕವನ್ನು ಒಳಗೊಂಡಿರುತ್ತೇವೆ. ಈ ಗೌಪ್ಯತಾ ನೋಟಿಸ್‌ಗೆ ಮಾಡಲಾದ ಬದಲಾವಣೆಗಳು ಮತ್ತು ಸೇರ್ಪಡೆಗಳು ಅವುಗಳನ್ನು ಪೋಸ್ಟ್ ಮಾಡಿದ ದಿನಾಂಕದಿಂದ ಜಾರಿಗೆ ಬರುತ್ತವೆ. ಈ ನೀತಿಗೆ ಮಾಡುವ ಬದಲಾವಣೆಗಳು ಪ್ರಕ್ರಿಯೆಯ ಸ್ವರೂಪದ ಮೇಲೆ ಮೂಲಭೂತ ಪ್ರಭಾವ ಬೀರಿದಾಗ ಅಥವಾ ನಿಮ್ಮ ಮೇಲೆ ಗಣನೀಯ ಪ್ರಭಾವ ಬೀರಿದಾಗ, ನಿಮ್ಮ ಹಕ್ಕುಗಳನ್ನು ಚಲಾಯಿಸಲು (ಉದಾಹರಣೆಗೆ, ಪ್ರಕ್ರಿಯೆಗೆ ಆಕ್ಷೇಪಣೆ ಸಲ್ಲಿಸಲು) ನಿಮಗೆ ಅವಕಾಶ ನೀಡುವ ಸಲುವಾಗಿ ನಾವು ಸಾಕಷ್ಟು ಮುಂಚಿತವಾಗಿ ನೋಟಿಸ್ ನೀಡುತ್ತೇವೆ.