GE Aerospace ಮತ್ತು FHI 360, Inc. (FHI 360) ಸಂಸ್ಥೆಗಳು 'GE Next Engineers' ಪ್ರೋಗ್ರಾಂ ಅನ್ನು ಒದಗಿಸಲು ಪಾಲುದಾರಿಕೆ ಹೊಂದಿವೆ (ಈ ಪಠ್ಯದಾದ್ಯಂತ GE Aerospace ಮತ್ತು FHI 360 ಸಂಸ್ಥೆಗಳನ್ನು ಒಟ್ಟಾಗಿ “ನಾವು”, “ನಮಗೆ” ಮತ್ತು “ನಮ್ಮ” ಎಂದು ಉಲ್ಲೇಖಿಸಲಾಗಿದೆ). ನಾವು ಕುಕೀಗಳನ್ನು ಹೇಗೆ ಬಳಸುತ್ತೇವೆ ಮತ್ತು ನೀವು ಅವುಗಳನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಈ ಸೂಚನೆಯು ವಿವರಿಸುತ್ತದೆ.
ಕುಕೀಗಳು ಎಂದರೇನು?
ಕುಕೀಗಳು ನೀವು ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ನಿಮ್ಮ ಕಂಪ್ಯೂಟರ್ ಅಥವಾ ಸಾಧನಕ್ಕೆ ಕಳುಹಿಸಲಾಗುವ ಸಣ್ಣ ಪಠ್ಯ ಫೈಲ್‌ಗಳಾಗಿವೆ. ನೀವು ಭೇಟಿ ನೀಡುವ ವೆಬ್‌ಸೈಟ್‌ಗಳೊಂದಿಗೆ ನೀವು ಹೇಗೆ ಸಂವಹನ ನಡೆಸುತ್ತೀರಿ ಎಂಬುದರ ಕುರಿತು ಅವು ಮಾಹಿತಿಯನ್ನು ಸಂಗ್ರಹಿಸುತ್ತವೆ. ಹೆಚ್ಚಿನ ಮಾಹಿತಿಗಾಗಿ, www.aboutcookies.org ಅಥವಾ www.allaboutcookies.org. ಗೆ ಭೇಟಿ ನೀಡಿ.
ನಾವು ಬಳಸುವ ಕುಕೀಗಳ ವಿಧಗಳು ಮತ್ತು ಅವುಗಳನ್ನು ಬಳಸುವ ವಿಧಾನ
ನಾವು ಕುಕೀಗಳನ್ನು ಇವುಗಳಿಗಾಗಿ ಬಳಸುತ್ತೇವೆ:
ನಮ್ಮ ವಿಷಯದೊಂದಿಗೆ ನೀವು ಹೇಗೆ ಸಂವಹನ ನಡೆಸುತ್ತೀರಿ ಎಂಬುದನ್ನು ತಿಳಿಯಲು
ನಮ್ಮ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ ನಿಮ್ಮ ಅನುಭವವನ್ನು ಸುಧಾರಿಸಲು ನಮಗೆ ಸಹಾಯ ಮಾಡಲು
ದೋಷಗಳನ್ನು ಗುರುತಿಸಲು ಮತ್ತು ಅವುಗಳನ್ನು ಪರಿಹರಿಸಲು
ನಮ್ಮ ವೆಬ್‌ಸೈಟ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ವಿಶ್ಲೇಷಿಸಲು
ನಾವು ಬಳಸುವ ಕುಕೀಗಳ ವಿಧಗಳು ಇಂತಿವೆ:
ಸೈಟ್ ಅನುಭವದ ಕುಕೀಗಳು: ನೀವು ನಮ್ಮ ವೆಬ್‌ಸೈಟ್‌ಗಳಿಗೆ ಮರಳಿದಾಗ ಈ ಕುಕೀಗಳು ನಿಮ್ಮನ್ನು ಗುರುತಿಸುತ್ತವೆ, ಇದು ನಿಮ್ಮ ಭಾಷೆಯ ಆಯ್ಕೆಯಂತಹ ನಿಮ್ಮ ಆದ್ಯತೆಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಸುದ್ದಿಪತ್ರ (newsletter) ಚಂದಾದಾರಿಕೆಗಳ ಬಗ್ಗೆ ಸೂಕ್ತವಾದ ಸಂದೇಶಗಳನ್ನು ಪ್ರದರ್ಶಿಸಲು ನಮಗೆ ಸಹಾಯ ಮಾಡುತ್ತದೆ.
ಕ್ಲಿಕ್-ಥ್ರೂ ಯುಆರ್‌ಎಲ್‌ಗಳು: ನೀವು ನಮ್ಮ ಸುದ್ದಿಪತ್ರಗಳಿಗೆ ಚಂದಾದಾರರಾಗಿದ್ದರೆ, ನಮ್ಮ ಇಮೇಲ್‌ಗಳು ನಮ್ಮ ಸೈಟ್‌ಗಳಲ್ಲಿನ ವಿಷಯಕ್ಕೆ ಲಿಂಕ್ ಮಾಡಲಾದ “ಕ್ಲಿಕ್-ಥ್ರೂ ಯುಆರ್‌ಎಲ್‌ಗಳನ್ನು” ಹೊಂದಿರಬಹುದು. ನೀವು ಈ ಯುಆರ್‌ಎಲ್‌ಗಳಲ್ಲಿ ಒಂದನ್ನು ಕ್ಲಿಕ್ ಮಾಡಿದಾಗ, ಅವು ನಮ್ಮ ವೆಬ್‌ಸೈಟ್‌ಗಳ ಗಮ್ಯಸ್ಥಾನದ ಪುಟಕ್ಕೆ ಬರುವ ಮೊದಲು ಪ್ರತ್ಯೇಕ ವೆಬ್ ಸರ್ವರ್ ಮೂಲಕ ಹಾದುಹೋಗುತ್ತವೆ. ಸ್ವೀಕರಿಸುವವರು ನಮ್ಮ ಸುದ್ದಿಪತ್ರಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಅಥವಾ ಸಂವಹನ ನಡೆಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಈ ಡೇಟಾವನ್ನು ಬಳಸುತ್ತೇವೆ.
Google ಅನಾಲಿಟಿಕ್ಸ್: ನಾವು Google ನ ವಿಶ್ಲೇಷಣಾ ಸೇವೆಯನ್ನು ಬಳಸುತ್ತೇವೆ, ಇದು ನಮ್ಮ ಸೈಟ್‌ಗಳ ನಿಮ್ಮ ಬಳಕೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಮತ್ತು ನಮಗೆ ವೆಬ್‌ಸೈಟ್ ಟ್ರೆಂಡ್‌ಗಳನ್ನು ವರದಿ ಮಾಡಲು ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳನ್ನು ಬಳಸುತ್ತದೆ. ಇದು ಯಾವುದೇ ವ್ಯಕ್ತಿಗಳನ್ನು ನಮಗೆ ಗುರುತಿಸುವುದಿಲ್ಲ. ನಮ್ಮ ವೆಬ್‌ಸೈಟ್‌ಗಳಲ್ಲಿನ ಬಳಕೆಯ ಒಟ್ಟಾರೆ ಮಾದರಿಗಳನ್ನು ನೋಡಲು, ನಮ್ಮ ಸೈಟ್‌ಗಳಲ್ಲಿನ ಸಮಸ್ಯೆಗಳನ್ನು ಗುರುತಿಸಲು ಮತ್ತು ನಮ್ಮ ಸಂವಹನ ಪ್ರಯತ್ನಗಳ ಪರಿಣಾಮಕಾರಿತ್ವವನ್ನು ಅಳೆಯಲು ನಾವು ಈ ಮಾಹಿತಿಯನ್ನು ಬಳಸುತ್ತೇವೆ. Googleನ ಗೌಪ್ಯತಾ ಅಭ್ಯಾಸಗಳ ಬಗ್ಗೆ ತಿಳಿಯಲು
ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳು ಮತ್ತು ಮಾಧ್ಯಮ ಸೈಟ್‌ಗಳು: Facebook, Twitter ಮತ್ತು LinkedIn ನಂತಹ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳ ಮೂಲಕ ನಮ್ಮ ವಿಷಯವನ್ನು ಹಂಚಿಕೊಳ್ಳಲು ಅಥವಾ ಯೂಟ್ಯೂಬ್‌ನಂತಹ ಮಾಧ್ಯಮ ಸೈಟ್‌ನಲ್ಲಿ ನಮ್ಮ ವೀಡಿಯೊಗಳಲ್ಲಿ ಒಂದನ್ನು ವೀಕ್ಷಿಸಲು ನೀವು ನಿರ್ಧರಿಸಿದರೆ, ಆ ಮೂರನೇ ವ್ಯಕ್ತಿಯ ಸೈಟ್‌ಗಳು ನಿಮ್ಮ ಕಂಪ್ಯೂಟರ್‌ನಲ್ಲಿ ಕುಕೀಗಳನ್ನು ಇರಿಸಬಹುದು. ನಾವು ಈ ಕುಕೀಗಳನ್ನು ನಿಯಂತ್ರಿಸುವುದಿಲ್ಲ. ಅವುಗಳ ಕುಕೀಗಳ ಬಳಕೆ ಮತ್ತು ಅವುಗಳನ್ನು ಹೇಗೆ ನಿರ್ವಹಿಸುವುದು ಎಂಬ ಮಾಹಿತಿಗಾಗಿ ದಯವಿಟ್ಟು ಆ ಸೈಟ್‌ಗಳನ್ನು ಪರಿಶೀಲಿಸಿ.
ನೀವು ಕುಕೀಗಳನ್ನು ಹೇಗೆ ನಿಯಂತ್ರಿಸಬಹುದು
ನಮ್ಮ ಸೈಟ್‌ಗಳನ್ನು ಬ್ರೌಸ್ ಮಾಡಲು ನೀವು ಕುಕೀಗಳನ್ನು ಸಕ್ರಿಯಗೊಳಿಸುವ (enable) ಅಗತ್ಯವಿಲ್ಲ. ಆದರೆ ನೀವು ಅವುಗಳನ್ನು ಸಕ್ರಿಯಗೊಳಿಸದಿರಲು ನಿರ್ಧರಿಸಿದರೆ, ನಮ್ಮ ವೆಬ್‌ಸೈಟ್‌ಗಳಲ್ಲಿ ನೀಡಲಾಗುವ ಎಲ್ಲಾ ಕಾರ್ಯಗಳನ್ನು ಬಳಸಲು ನಿಮಗೆ ಸಾಧ್ಯವಾಗದಿರಬಹುದು. ನಮ್ಮ ಇಮೇಲ್‌ಗಳಿಂದ ಕುಕೀಗಳನ್ನು ಸ್ವೀಕರಿಸಲು ನೀವು ಬಯಸದಿದ್ದರೆ, ಯಾವುದೇ ಚಿತ್ರಗಳನ್ನು ಡೌನ್‌ಲೋಡ್ ಮಾಡದಂತೆ ಅಥವಾ ಯಾವುದೇ ಲಿಂಕ್‌ಗಳಿಗೆ ಹೋಗದಂತೆ, ಎಲ್ಲಾ ಕುಕೀಗಳನ್ನು ನಿರಾಕರಿಸಲು ಅಥವಾ ನಿಮ್ಮ ಕಂಪ್ಯೂಟರ್‌ಗೆ ಕುಕೀ ಕಳುಹಿಸಿದಾಗ ಸೂಚಿಸುವಂತೆ ನಿಮ್ಮ ಬ್ರೌಸರ್‌ನಲ್ಲಿ ನೀವು ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಇಮೇಲ್, ಬ್ರೌಸರ್ ಅಥವಾ ಸಾಧನದ ಸೂಚನೆಗಳನ್ನು ನೋಡಿ.



