ನಮ್ಮ ಕಾರ್ಯಕ್ರಮ 

GE Aerospace logo

2025ರ ಸೆಪ್ಟೆಂಬರ್ 24 ರಂದು, GE Aerospace Foundation, ಭಾರತದ GE Aerospace ಮತ್ತು United Way Bengaluru ಸಹಯೋಗದೊಂದಿಗೆ ಬೆಂಗಳೂರಿನಲ್ಲಿ Next Engineers ಕಾರ್ಯಕ್ರಮವನ್ನು ಚಾಲನೆ ನೀಡಿದೆ. ನಾವೆಲ್ಲರೂ ಒಟ್ಟಾಗಿ ಬೆಂಗಳೂರು ಭಾಗದ ಯುವಜನರಲ್ಲಿ ಹೂಡಿಕೆ ಮಾಡುತ್ತಿದ್ದೇವೆ — ಇವರೇ ಜಗತ್ತಿಗೆ ಅಗತ್ಯವಿರುವ ಬದಲಾವಣೆಯನ್ನು ತರುವ ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಾಗಿದ್ದಾರೆ.
 
 
GE Aerospace ಉದ್ಯೋಗಿಗಳ ಗಮನಕ್ಕೆ: ನಿಮಗೆ Next Engineers ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಲು ಆಸಕ್ತಿ ಇದೆಯಾ? ಹಾಗಿದ್ದಲ್ಲಿ, ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ತಂಡವನ್ನು ಸಂಪರ್ಕಿಸಿ.
ಅಂತರಿಕ್ಷನೌಕೆ
Engineering Discovery
9ನೇ ತರಗತಿ
ಅನ್ವೇಷಿಸಲು ಮತ್ತು ಅರಿಯಲು ಸುವರ್ಣ ಅವಕಾಶಗಳು
 
 
GE Aerospace ಇಂಜಿನಿಯರ್‌ಗಳ ನೇತೃತ್ವದಲ್ಲಿ ಅಥವಾ ಅವರ ಸಹಯೋಗದೊಂದಿಗೆ ನಡೆಯುವ ಕಿರು ಅನ್ವೇಷಣಾ ಅವಧಿಗಳ ಮೂಲಕ, ಇಂಜಿನಿಯರ್‌ಗಳು ಏನು ಮಾಡುತ್ತಾರೆ ಎಂಬುದರ ಬಗ್ಗೆ ವಿದ್ಯಾರ್ಥಿಗಳು ಅರಿವು ಪಡೆಯುತ್ತಾರೆ. ತರಗತಿ ಅಥವಾ ಸಮುದಾಯದಲ್ಲಿ ನಡೆಯುವ ಈ ಸೃಜನಾತ್ಮಕ ಮತ್ತು ಪ್ರಾಯೋಗಿಕ ಚಟುವಟಿಕೆಗಳು ಯುವಜನರಿಗೆ ಸ್ಫೂರ್ತಿ ನೀಡುತ್ತವೆ ಮತ್ತು ಇಂಜಿನಿಯರಿಂಗ್ ಅಂದರೇನು ಎಂಬ ಅವರ ತಿಳುವಳಿಕೆಯನ್ನು ವಿಸ್ತರಿಸುತ್ತವೆ.
 
ಶಾಲಾ ಶಿಕ್ಷಕರು ಅಥವಾ ಆಡಳಿತ ಮಂಡಳಿಯವರ ಗಮನಕ್ಕೆ: ನಿಮ್ಮ ಶಾಲೆಯಲ್ಲಿ Engineering Discovery ಚಟುವಟಿಕೆಗಳನ್ನು ಆಯೋಜಿಸಲು ನೀವು ಆಸಕ್ತಿ ಹೊಂದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ಈ ಬಗ್ಗೆ ಹೆಚ್ಚಿನ ಚರ್ಚೆಗಾಗಿ United Way ಬೆಂಗಳೂರು ನಿಮ್ಮನ್ನು ಸಂಪರ್ಕಿಸಲಿದೆ. ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು nextengineers@uwbengaluru.org ಗೆ ಇಮೇಲ್ ಮಾಡಿ.
ಗ್ರಾಡ್‌ ಹ್ಯಾಟ್
Engineering Academy
11ನೇ ತರಗತಿ
ಒಂದು ಪರಿವರ್ತನಾತ್ಮಕ ಎಂಜಿನಿಯರಿಂಗ್ ಅನುಭವ
 
 
ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೀರಾ ಮತ್ತು ಒಬ್ಬ ಇಂಜಿನಿಯರ್‌ನಂತೆ ಆಲೋಚಿಸುವ ಹಾಗೂ ಕಾರ್ಯನಿರ್ವಹಿಸುವ ಅವಕಾಶವನ್ನು ಬಯಸುತ್ತೀರಾ? ಹಾಗಿದ್ದಲ್ಲಿ, Engineering Academy ಸೇರಲು ಇಂದೇ ಅರ್ಜಿ ಸಲ್ಲಿಸಿ.
 
ವಿಜ್ಞಾನ ವಿಭಾಗದ ಪಿಯುಸಿ (11ನೇ ತರಗತಿ) ಅಥವಾ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನ (ITI) ಎಂಜಿನಿಯರಿಂಗ್ ಡಿಪ್ಲೋಮಾ ಕಾರ್ಯಕ್ರಮದ ಮೊದಲ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ Engineering Academy ತೆರೆದಿದೆ. ವಿದ್ಯಾರ್ಥಿಗಳು 10ನೇ ತರಗತಿಯ ಕೊನೆಯಲ್ಲಿ ಈ ಅಕಾಡೆಮಿಗೆ ಅರ್ಜಿ ಸಲ್ಲಿಸಬಹುದು ಮತ್ತು ಅವರ ಪ್ರವೇಶವು 11ನೇ ತರಗತಿ ಅಥವಾ ITI ಮೊದಲ ವರ್ಷದ ಆರಂಭದಲ್ಲಿ ಖಚಿತವಾಗುತ್ತದೆ.
 
ಎರಡು ವರ್ಷಗಳ ಅವಧಿಯಲ್ಲಿ, ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೌಶಲಗಳನ್ನು ಕಲಿಯುತ್ತಾರೆ ಮತ್ತು ಉನ್ನತ ವಿಶ್ವವಿದ್ಯಾಲಯದ ಶಿಕ್ಷಣಕ್ಕಾಗಿ ಸಿದ್ಧರಾಗುತ್ತಾರೆ. ಶಾಲಾ ಸಮಯದ ಹೊರತಾಗಿ 2 ವರ್ಷಗಳಲ್ಲಿ 180ಕ್ಕೂ ಹೆಚ್ಚು ಗಂಟೆಗಳ ಕಾಲ ನಡೆಯುವ ಈ ಅಕಾಡೆಮಿಯು, ತಲ್ಲೀನಗೊಳಿಸುವ ವಿನ್ಯಾಸ ಸವಾಲುಗಳು, ವೃತ್ತಿಜೀವನದ ಮಾರ್ಗದರ್ಶನ ಮತ್ತು ವಿಶ್ವವಿದ್ಯಾಲಯದ ಸಿದ್ಧತಾ ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ. ಇದು ಯುವಜನರಿಗೆ ಇಂಜಿನಿಯರಿಂಗ್ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಅಗತ್ಯವಿರುವ ಕೌಶಲಗಳನ್ನು ಒದಗಿಸುತ್ತದೆ. ಇಂಜಿನಿಯರಿಂಗ್ ಪದವಿ ಶಿಕ್ಷಣವನ್ನು ಮುಂದುವರಿಸುವ ಅರ್ಹ Next Engineers Academy ಪದವೀಧರರಿಗೆ ಸ್ಕಾಲರ್‌ಶಿಪ್‌ಗಳನ್ನು ನೀಡಲಾಗುತ್ತದೆ.
 
ಅರ್ಜಿ ಸಲ್ಲಿಕೆ ಈಗ ಆರಂಭವಾಗಿದೆ! ಅರ್ಜಿ ಸಲ್ಲಿಸಲು, ದಯವಿಟ್ಟು ಮೊದಲು ಒಂದು ಖಾತೆಯನ್ನು ರಚಿಸಿ ಮತ್ತು ನಂತರ ಕೆಳಗಿನ ಅರ್ಜಿಯ ಲಿಂಕ್ ಅನ್ನು ಬಳಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮಾರ್ಚ್ 10, 2026 ರವರೆಗೆ ವಿಸ್ತರಿಸಲಾಗಿದೆ! ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು nextengineers@uwbengaluru.org ಗೆ ಇಮೇಲ್ ಮಾಡಿ. ಧನ್ಯವಾದಗಳು!