ಇಂಜಿನಿಯರ್ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ವಿಜ್ಞಾನ ಮತ್ತು ಗಣಿತವನ್ನು ಬಳಸುತ್ತಾರೆ. ವಸ್ತುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಇಂಜಿನಿಯರ್‌ಗಳು ಕಂಡುಕೊಳ್ಳುತ್ತಾರೆ ಮತ್ತು ವೈಜ್ಞಾನಿಕ ಆವಿಷ್ಕಾರಗಳಿಗೆ ಪ್ರಾಯೋಗಿಕ ರೂಪ ನೀಡುತ್ತಾರೆ. ಈ ಹಿಂದೆ ಯಾರೂ ಊಹಿಸದ ಹೊಸ ವಿಷಯಗಳನ್ನು ಕಲ್ಪಿಸಿಕೊಳ್ಳುವುದು ಮತ್ತು ಸಾಕಾರಗೊಳಿಸುವುದು ಒಬ್ಬ ಇಂಜಿನಿಯರ್‌ನ ಪ್ರಮುಖ ಗುಣವಾಗಿದೆ. ಇಂಜಿನಿಯರ್ ಒಬ್ಬ ಸೃಷ್ಟಿಕರ್ತನೂ ಹೌದು, ಅವರು ದೈನಂದಿನ ಜೀವನಕ್ಕೆ ಬೇಕಾದ ವಸ್ತುಗಳನ್ನು ತಯಾರಿಸುತ್ತಾರೆ. ಹೆಚ್ಚಿನ ಜನರಿಗೆ ಕೈಗೆಟುಕುವ ದರದಲ್ಲಿ ಶುದ್ಧ ಇಂಧನವನ್ನು ತಲುಪಿಸುವುದು ಮತ್ತು ಎಲ್ಲೆಡೆ ಶುದ್ಧ ನೀರು ಲಭ್ಯವಾಗುವಂತೆ ಮಾಡುವುದು ಸೇರಿದಂತೆ ವಾಸ್ತವ ಪ್ರಪಂಚದ ಸಮಸ್ಯೆಗಳನ್ನು ಇಂಜಿನಿಯರ್‌ಗಳು ಪರಿಹರಿಸುತ್ತಾರೆ.
ವಿವಿಧ ರೀತಿಯ ಇಂಜಿನಿಯರ್‌ಗಳಿದ್ದಾರೆ, ಉದಾಹರಣೆಗೆ:
- ಸಿವಿಲ್ ಇಂಜಿನಿಯರ್‌ಗಳು: ರಸ್ತೆಗಳು, ಸೇತುವೆಗಳು, ಕಟ್ಟಡಗಳು, ಅಣೆಕಟ್ಟುಗಳು ಮತ್ತು ಇತರ ರಚನೆಗಳನ್ನು ವಿನ್ಯಾಸಗೊಳಿಸುತ್ತಾರೆ ಮತ್ತು ನಿರ್ಮಿಸುತ್ತಾರೆ. ಅವು ಸುರಕ್ಷಿತವಾಗಿವೆ ಮತ್ತು ದೀರ್ಘಕಾಲ ಬಾಳಿಕೆ ಬರುತ್ತವೆ ಎಂದು ಇವರು ಖಚಿತಪಡಿಸಿಕೊಳ್ಳುತ್ತಾರೆ.
- ಮೆಕ್ಯಾನಿಕಲ್ ಇಂಜಿನಿಯರ್‌ಗಳು: ಆಂಬ್ಯುಲೆನ್ಸ್, ಜೆಟ್ ಇಂಜಿನ್, ಟೆಲಿಸ್ಕೋಪ್‌ಗಳು ಮತ್ತು ಜೈಂಟ್ ವೀಲ್‌ಗಳಂತಹ ಯಂತ್ರಗಳನ್ನು ವಿನ್ಯಾಸಗೊಳಿಸುತ್ತಾರೆ ಮತ್ತು ನಿರ್ಮಿಸುತ್ತಾರೆ.
- ಎಲೆಕ್ಟ್ರಿಕಲ್ ಇಂಜಿನಿಯರ್‌ಗಳು: ಟ್ರಾಫಿಕ್ ಲೈಟ್‌ಗಳಂತಹ ಅಗತ್ಯ ವಸ್ತುಗಳನ್ನು ತಯಾರಿಸಲು ವಿದ್ಯುಚ್ಛಕ್ತಿಯೊಂದಿಗೆ ಕೆಲಸ ಮಾಡುತ್ತಾರೆ ಅಥವಾ ಕಾರುಗಳಿಗೆ ಶಕ್ತಿ ಒದಗಿಸಲು ಮತ್ತು ಎಲೆಕ್ಟ್ರಿಕ್ ವಿಮಾನದ ಇಂಜಿನ್‌ಗಳನ್ನು ವಿನ್ಯಾಸಗೊಳಿಸಲು ವಿದ್ಯುತ್ ಅನ್ನು ಬಳಸುತ್ತಾರೆ.
- ಕೆಮಿಕಲ್ ಇಂಜಿನಿಯರ್‌ಗಳು: ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಹೊಸ ಉತ್ಪನ್ನಗಳನ್ನು ತಯಾರಿಸುತ್ತಾರೆ. ಇವರು ಹೆಚ್ಚು ದಕ್ಷತೆಯ ಸೌರ ಫಲಕಗಳು ಮತ್ತು ದೊಡ್ಡ ಸ್ಟೋರೇಜ್ ಬ್ಯಾಟರಿಗಳನ್ನು ತಯಾರಿಸಲು ಕೆಲಸ ಮಾಡುತ್ತಾರೆ.
ನೈಜ ಇಂಜಿನಿಯರ್‌ಗಳಿಂದ ಇಂಜಿನಿಯರಿಂಗ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ನಮ್ಮ ವೃತ್ತಿಜೀವನದ ವಿವರಗಳನ್ನು ನೋಡಲು ನಮ್ಮ ಇಂಜಿನಿಯರ್‌ಗಳು ಏನು ಮಾಡುತ್ತಾರೆ? ಪುಟಕ್ಕೆ ಭೇಟಿ ನೀಡಿ.



