Skip to main content

User account menu

  • Log in
Home Next Engineers
  • ಬಗ್ಗೆ
    • ನಮ್ಮ ಪ್ರೋಗ್ರಾಂ
    • Our Leadership
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
    ಬದಲಾವಣೆಗಳನ್ನು ತರುವುದು
    ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
    ಇಂಜಿನಿಯರಿಂಗ್ ವಿದ್ಯಾರ್ಥಿಗಳು
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
    ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
    ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
    ಎತ್ತರಕ್ಕೆ ಗುರಿ ಇಡಿ
  • News
    ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
    Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
    ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು
  • ಲಾಗ್‌ ಇನ್

Main navigation

  • ಬಗ್ಗೆ
    • ನಮ್ಮ ಪ್ರೋಗ್ರಾಂ
    • Our Leadership
    • ಸ್ವಯಂಸೇವಕರು
    • ಇಂಜಿನಿಯರ್‌ಗಳು ಏನು ಮಾಡುತ್ತಾರೆ?
    • ಒಬ್ಬ ಇಂಜಿನಿಯರ್‌ ಆಗುವುದು
    • FAQ ಗಳು
  • ಪ್ರೋಗ್ರಾಂಗಳು
    • Engineering Academy
    • Engineering Camp
    • Engineering Discovery
    • ಮನೆಯಲ್ಲಿ ಇಂಜಿನಿಯರಿಂಗ್‌
  • ಸ್ಥಳಗಳು
    • ಬೆಂಗಳೂರು, ಭಾರತ
    • Cincinnati, OH
    • Greenville, SC
    • Johannesburg, S.A.
    • New York Capital Region
    • Staffordshire, U.K.
    • Warsaw, Poland
    • Global Discovery
  • News
  • ಲಾಗ್‌ ಇನ್

Cities navigation

ಜಗತ್ತಿನ ವಿವಿಧೆಡೆ ಇರುವ GE ಸಂಸ್ಥೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುತ್ತಿವೆ.
ನಗರದ ಬಗೆಗಿನ ವಿವರಗಳು, ಚಟುವಟಿಕೆಗಳು ಮತ್ತು ಹೇಗೆ ಸೇರಬಹುದು ಎಂಬುದನ್ನು ತಿಳಿಯಿರಿ.
ಎತ್ತರಕ್ಕೆ ಗುರಿ ಇಡಿ

Inspiration navigation

ಬದಲಾವಣೆಗಳನ್ನು ತರುವುದು
ಹೆಚ್ಚು ಸೃಜನಶೀಲ, ನವೀನ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಇಂಜಿನಿಯರ್‌ಗಳಿಗೆ ಸ್ಫೂರ್ತಿಯನ್ನು ಒದಗಿಸುತ್ತಿದ್ದೇವೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳು

News navigation

ಇತ್ತೀಚಿನ ಸುದ್ಧಿಗಳು ಮತ್ತು ಅಪ್‌ಡೇಟ್‌ಗಳು
Next Engineers ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಅಪ್‌ಡೇಟ್‌ಗಳನ್ನು ಮತ್ತು ವಿದ್ಯಮಾನಗಳನ್ನು ಓದಿ.
ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಂದು ಗುಂಪು

Resources navigation

ಎಲ್ಲಾ ಸಂಪನ್ಮೂಲಗಳನ್ನು ಅನ್ವೇಷಿಸಿ
ಯಶಸ್ವಿ Next Engineers ಕಾರ್ಯಕ್ರಮವನ್ನು ನಡೆಸಲು ಅಗತ್ಯವಿರುವ ಪರಿಕರಗಳನ್ನು ಇಲ್ಲಿ ಕಂಡುಕೊಳ್ಳಿ. ಇದರಲ್ಲಿ ಸಂವಹನ ಸಾಮಗ್ರಿಗಳು ಮತ್ತು ಟೆಂಪ್ಲೇಟ್‌ಗಳು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಔಟ್‌ರೀಚ್ ಸಾಮಗ್ರಿಗಳು, ವಿದ್ಯಾರ್ಥಿ ಚಟುವಟಿಕೆ ಮಾರ್ಗದರ್ಶಿಗಳು, ಇಂಜಿನಿಯರಿಂಗ್ ಸವಾಲುಗಳು ಮತ್ತು ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಂಪನ್ಮೂಲಗಳನ್ನು ಸೇರಿಸಲಾಗಿವೆ.
ತರಗತಿಯ ಕೊಠಡಿಯ ಮೇಜಿನ ಬಳಿ ಕುಳಿತು ನಗುತ್ತಿರುವ ಇಬ್ಬರು ಪುರುಷ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಕೃಪೆ: ಅನ್‌ಸ್ಪ್ಲಾಶ್‌ನಲ್ಲಿ ಜೆಸ್ವಿನ್ ಥಾಮಸ್
Challenge Yourself
Find activity guides and resources to help you as students, parents, and teachers stay curious and build worlds that haven't even been thought of yet.
Challenge yourself
Measuring Impact
Partners and volunteers can explore real-time data on each Next Engineers program to see the difference they’re making in their communities.
Facilitator Amber showing the whitebaord

ಅಕಾಡೆಮಿ ಸ್ಕಾಲರ್‌ಶಿಪ್ ಮಾಹಿತಿ

Engineering Academy ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ನಿಗದಿತ ಅರ್ಹತೆಗಳನ್ನು ಪಡೆಯುವ ವಿದ್ಯಾರ್ಥಿಗಳು ತಮ್ಮ ಮುಂದಿನ ಇಂಜಿನಿಯರಿಂಗ್ ಉನ್ನತ ಶಿಕ್ಷಣವನ್ನು ಪೂರೈಸಲು ಒಂದು ಬಾರಿಯ ಭಾಗಶಃ ಸ್ಕಾಲರ್‌ಶಿಪ್‌ ಅನ್ನು ಪಡೆಯಲು ಅರ್ಹರಿರುತ್ತಾರೆ (ಮತ್ತು ಯು.ಕೆ. ಯಲ್ಲಿ ಇದು ವೃತ್ತಿಪರ ತರಬೇತಿಗೂ ಅನ್ವಯಿಸುತ್ತದೆ). ಅರ್ಹತೆಯ ನಿಯಮಗಳನ್ನು ನೀವು ಇಲ್ಲಿ ಓದಬಹುದು.

 

ಪಾಲಿಸಿಯನ್ನು ಓದಿ

important-tip primary
ಸ್ಕಾಲರ್‌ಶಿಪ್ ಸಂಪರ್ಕ

Engineering Academy ಸ್ಕಾಲರ್‌ಶಿಪ್ ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೆ ದಯವಿಟ್ಟು NEscholarships@fhi360.org ಗೆ ಇಮೇಲ್ ಮಾಡಿ.

ಸ್ಕಾಲರ್‌ಶಿಪ್‌ ವಿತರಣಾ ಪ್ರಕ್ರಿಯೆಯನ್ನು ಅನುಸರಿಸಿ

Distribution Process

 

ನೀವು ಮುಂದೂಡಿದರೆ ಏನಾಗುತ್ತದೆ?

Deferment process

ಸ್ಕಾಲರ್‌ಶಿಪ್ ಪ್ರಕ್ರಿಯೆಯ ಅವಲೋಕನ
  • ಪಾಲಿಸಿಯನ್ನು ಅವಲೋಕಿಸಿ

    ಅರ್ಹತಾ ನಿಯಮಗಳನ್ನು ಗಮನವಿಟ್ಟು ಓದಿ ಮತ್ತು ಪ್ರತಿಯೊಂದು ಮಾನದಂಡವನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ನಿಗದಿಪಡಿಸಿದ ಎಲ್ಲಾ ಮಾನದಂಡಗಳನ್ನು ಪೂರೈಸುವ ವಿದ್ಯಾರ್ಥಿಗಳು ಮಾತ್ರ ಸ್ಕಾಲರ್‌ಶಿಪ್‌ಗೆ ಅರ್ಹರಾಗಿರುತ್ತಾರೆ. ಅರ್ಹತೆಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ನಿಮ್ಮ ಅಕಾಡೆಮಿ ಸಂಯೋಜಕರನ್ನು ಸಂಪರ್ಕಿಸಿ.

  • ನಿಮ್ಮ ಯೋಜನೆಗಳನ್ನು ಹಂಚಿಕೊಳ್ಳಿ

    ನಿಮ್ಮ ಅಕಾಡೆಮಿ ಸಂಯೋಜಕರು ನಿಮ್ಮ ಸಂಪರ್ಕ ವಿವರಗಳನ್ನು ಸಂಗ್ರಹಿಸುತ್ತಾರೆ ಮತ್ತು ನಿಮ್ಮ ಉನ್ನತ ಶಿಕ್ಷಣದ ಯೋಜನೆಗಳ (ಕಾಲೇಜು, ವಿಶ್ವವಿದ್ಯಾಲಯ ಅಥವಾ ವೃತ್ತಿಪರ ತರಬೇತಿ) ಬಗ್ಗೆ ಮಾಹಿತಿ ಪಡೆಯುತ್ತಾರೆ. ವಿದ್ಯಾರ್ಥಿಗಳು ಅಕಾಡೆಮಿ ಪೂರ್ಣಗೊಂಡ ನಂತರವೂ ಬಳಸಬಹುದಾದ ಇಮೇಲ್ ವಿಳಾಸವನ್ನೇ ನೀಡಬೇಕು. ಪದವಿ ಮುಗಿದ ನಂತರ ನಿಷ್ಕ್ರಿಯವಾಗಬಹುದಾದ ಶಾಲಾ ಇಮೇಲ್ ವಿಳಾಸಗಳನ್ನು ಬಳಸಬೇಡಿ.

  • ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

    Monday.com ಪ್ಲಾಟ್‌ಫಾರ್ಮ್ ಬಳಸಿ ನೀವು ನಿಮ್ಮ ಅರ್ಹತಾ ದಾಖಲೆಗಳ ಪ್ರತಿಗಳನ್ನು ಸಲ್ಲಿಸಬೇಕು. ಇದರಲ್ಲಿ ನಿಮ್ಮ ಪ್ರವೇಶ ಪತ್ರಗಳು (Acceptance letters) ಮತ್ತು ದಾಖಲಾತಿ ಪುರಾವೆಗಳು (Proof of enrollment) ಸೇರಿರುತ್ತವೆ. ದಾಖಲೆಗಳನ್ನು ಸಲ್ಲಿಸುವ ವಿಧಾನ ಮತ್ತು ಅವುಗಳನ್ನು ಸ್ವೀಕರಿಸಿದ ಬಗ್ಗೆ ದೃಢೀಕರಣಕ್ಕಾಗಿ ನಿಮ್ಮ ಇಮೇಲ್ ಅನ್ನು ಆಗಾಗ್ಗೆ ಪರಿಶೀಲಿಸುತ್ತಿರಿ. ಪ್ರತಿ ಅಕಾಡೆಮಿ ಕೇಂದ್ರವು ಆಯಾ ದೇಶಕ್ಕೆ ನಿಗದಿಪಡಿಸಿದ ಕಾಲಮಿತಿ ಮತ್ತು ಪ್ರಕ್ರಿಯೆಯನ್ನು ಅನುಸರಿಸುತ್ತದೆ. ದಯವಿಟ್ಟು ನಿಮ್ಮ ಕೇಂದ್ರಕ್ಕೆ ಅನ್ವಯಿಸುವ ಅಂತಿಮ ದಿನಾಂಕಗಳ ಬಗ್ಗೆ ಗಮನ ವಹಿಸಿ.

  • ಸ್ಕಾಲರ್‌ಶಿಪ್ ಸ್ವೀಕರಿಸಿ

    ಎಲ್ಲಾ ಅರ್ಹತಾ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿ, ಮಾನ್ಯತೆ ಪಡೆದ ಇಂಜಿನಿಯರಿಂಗ್ ಕೋರ್ಸ್‌ಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್ ಅನ್ನು ಪಡೆಯಲಿದ್ದಾರೆ. ನಿಮ್ಮ ಸ್ಕಾಲರ್‌ಶಿಪ್ ಮೊತ್ತವನ್ನು ಪಡೆಯಲು, ಪಾವತಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಿ ಮತ್ತು ಸ್ಕಾಲರ್‌ಶಿಪ್‌ನ ಅಂಗೀಕಾರ ಪತ್ರವನ್ನು ಪರಿಶೀಲಿಸಿ.

  • primary-background

    robotics arm

    ದೇಶದ ಪ್ರಕಾರ ಸೂಚನೆಗಳು

    ಸ್ಕಾಲರ್‌ಶಿಪ್‌ ಅರ್ಜಿ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಿಮ್ಮ ದೇಶದ ಪುಟಕ್ಕೆ ಭೇಟಿ ನೀಡಿ.

    ಯುನೈಟೆಡ್ ಸ್ಟೇಟ್ಸ್

    USA ಧ್ವಜ

    ಯುನೈಟೆಡ್ ಕಿಂಗ್‌ಡಮ್

    UK ಧ್ವಜ

    ಸೌತ್‌ ಆಫ್ರಿಕಾ

    ಪದೇ ಪದೇ ಕೇಳಲಾಗುವ ಪ್ರಶ್ನೆಗಳು
  • Next Engineers ಸ್ಕಾಲರ್‌ಶಿಪ್ ಯಾವ ವೆಚ್ಚಗಳನ್ನು ಭರಿಸಲು ಉದ್ದೇಶಿಸಿದೆ?

    ಈ ಹಣವನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು. ಇದು ಬೋಧನಾ ಶುಲ್ಕ, ವಸತಿ, ಪಠ್ಯಪುಸ್ತಕಗಳು, ಶೈಕ್ಷಣಿಕ ಪರಿಕರಗಳು ಮತ್ತು/ಅಥವಾ ನಿಮ್ಮ ಶಿಕ್ಷಣ ಅಥವಾ ಅಪ್ರೆಂಟಿಸ್‌ಶಿಪ್‌ಗೆ ನೇರವಾಗಿ ಸಂಬಂಧಿಸಿದ ಇತರ ವೆಚ್ಚಗಳನ್ನು ಒಳಗೊಂಡಿರಬಹುದು.

  • ನನ್ನ ಮಾಹಿತಿ ಬದಲಾಗಿದೆ, ನಾನು ಹೊಸ ಫಾರ್ಮ್‌ ಅನ್ನು ಮರುಸಲ್ಲಿಸಬಹುದೇ?

    ಹೌದು, ದಯವಿಟ್ಟು ಫಾರ್ಮ್ ಅನ್ನು ಮತ್ತೊಮ್ಮೆ ಭರ್ತಿ ಮಾಡಿ ಮತ್ತು ಮರುಸಲ್ಲಿಸಿ. ಫಾರ್ಮ್‌ನ ಲಿಂಕ್‌ಗಳು ವೆಬ್‌ಸೈಟ್‌ನ ಈ ವಿಳಾಸದಲ್ಲಿ ಲಭ್ಯವಿವೆ:  https://www.nextengineers.org/academy-scholarship-information. https://www.nextengineers.org/academy-scholarship-information. ದಯವಿಟ್ಟು ನಿಮ್ಮ ದೇಶಕ್ಕೆ ನಿಗದಿಪಡಿಸಿದ ಫಾರ್ಮ್‌ಗಳನ್ನೇ ಬಳಸಿ.

  • ನಾನು ಅಕಾಡೆಮಿಯ ಪೂರ್ಣಗೊಳಿಸುವಿಕೆಯ ಅಗತ್ಯತೆಗಳನ್ನು ಪೂರೈಸುತ್ತಿದ್ದೇನೆಯೇ ಮತ್ತು ಸ್ಕಾಲರ್‌ಶಿಪ್‌ ಪಡೆಯುವಲ್ಲಿ ಸರಿಯಾದ ಮಾರ್ಗದಲ್ಲಿದ್ದೇನೆಯೇ ಎಂದು ನನಗೆ ತಿಳಿಯುವುದು ಹೇಗೆ?

    ಕಮ್ಯುನಿಟಿ ಪಾರ್ಟ್‌ನರ್‌ಗಳು ವಿದ್ಯಾರ್ಥಿಗಳ ಹಾಜರಾತಿ ಸೇರಿದಂತೆ ಅಕಾಡೆಮಿಯ ಎಲ್ಲಾ ಅಗತ್ಯತೆಗಳ ಬಗ್ಗೆ ನಿಗಾ ವಹಿಸುತ್ತಾರೆ ಮತ್ತು ಮಾಹಿತಿ ನೀಡುತ್ತಾರೆ. ಅಕಾಡೆಮಿಯ ನಿಯಮಗಳು ಅಥವಾ ನಿಮ್ಮ ಪ್ರಗತಿಯ ಸ್ಥಿತಿಯ ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ವಿದ್ಯಾರ್ಥಿಗಳು ತಮ್ಮ ಕಮ್ಯುನಿಟಿ ಪಾರ್ಟ್‌ನರ್‌ ಸಂಸ್ಥೆಗಳನ್ನು (ಸಿನ್ಸಿನಾಟಿ ವಿಶ್ವವಿದ್ಯಾಲಯ, ಕ್ಲೆಮ್‌ಸನ್ ವಿಶ್ವವಿದ್ಯಾಲಯ, TILG, ಅಥವಾ Protec) ಸಂಪರ್ಕಿಸಬೇಕು.

  • ನಾನು ಅಕಾಡೆಮಿಯ ಎಲ್ಲಾ ಅಗತ್ಯತೆಗಳನ್ನು ಪೂರೈಸಿದರೂ ಅರ್ಹ ಕಾರ್ಯಕ್ರಮಕ್ಕೆ ಅಂಗೀಕಾರ ದೊರೆಯದಿದ್ದರೆ ಅಥವಾ ಅಂಗೀಕಾರ ದೊರೆತರೂ ನಾನು ಅದನ್ನು ಮುಂದೂಡಲು ಬಯಸಿದರೆ ಏನಾಗುತ್ತದೆ?

    ಅಕಾಡೆಮಿ ಪದವಿ ಮುಗಿದ ನಂತರದ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದವರೆಗೆ ವಿದ್ಯಾರ್ಥಿಗಳಿಗೆ ಅರ್ಹ ಉನ್ನತ ಶಿಕ್ಷಣ ಅಥವಾ ಅಪ್ರೆಂಟಿಸ್‌ಶಿಪ್‌ಗೆ ದಾಖಲಾಗಲು ಕಾಲಾವಕಾಶವಿರುತ್ತದೆ. ಆ ಒಂದು ವರ್ಷದೊಳಗೆ ಅರ್ಹ ಕಾರ್ಯಕ್ರಮಕ್ಕೆ ದಾಖಲಾತಿ ಪಡೆಯದ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ನ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ವಿಳಂಬವನ್ನು ಕೇವಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಪರಿಗಣಿಸಲಾಗುತ್ತದೆ ಮತ್ತು ಅದನ್ನು ಪ್ರತಿ ಪ್ರಕರಣದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.

    ಯುನೈಟೆಡ್ ಸ್ಟೇಟ್ಸ್ಕೊಹರ್ಟ್‌ 1 ಅಕಾಡೆಮಿಯು ಮೇ 2024 ರಲ್ಲಿ ಪೂರ್ಣಗೊಂಡಿದೆಕಾಲೇಜು/ವಿಶ್ವವಿದ್ಯಾಲಯ ದಾಖಲಾತಿಗೆ ಅಂತಿಮ ದಿನಾಂಕ: ಆಗಸ್ಟ್ 2025
    ಯುನೈಟೆಡ್ ಕಿಂಗ್‌ಡಮ್ಕೊಹರ್ಟ್‌ 1 ಅಕಾಡೆಮಿಯು ಜುಲೈ 2024 ರಲ್ಲಿ ಪೂರ್ಣಗೊಂಡಿದೆವಿಶ್ವವಿದ್ಯಾಲಯ ಅಥವಾ ಅಪ್ರೆಂಟಿಸ್‌ಶಿಪ್‌ ದಾಖಲಾತಿಗೆ ಅಂತಿಮ ದಿನಾಂಕ: ಸೆಪ್ಟೆಂಬರ್ 2025
    ಸೌತ್‌ ಆಫ್ರಿಕಾಕೊಹರ್ಟ್‌ 1 ಅಕಾಡೆಮಿಯು ಡಿಸೆಂಬರ್‌ 2024 ರಲ್ಲಿ ಪೂರ್ಣಗೊಂಡಿದೆವಿಶ್ವವಿದ್ಯಾಲಯದ ದಾಖಲಾತಿಗೆ ಅಂತಿಮ ದಿನಾಂಕ: ಮಾರ್ಚ್ 2026

     

    ಯುನೈಟೆಡ್ ಸ್ಟೇಟ್ಸ್ಕೊಹರ್ಟ್‌ 2 ಅಕಾಡೆಮಿಯು ಮೇ 2025 ರಲ್ಲಿ ಪೂರ್ಣಗೊಂಡಿದೆಕಾಲೇಜು/ವಿಶ್ವವಿದ್ಯಾಲಯ ದಾಖಲಾತಿಗೆ ಅಂತಿಮ ದಿನಾಂಕ: ಆಗಸ್ಟ್ 2026
    ಯುನೈಟೆಡ್ ಕಿಂಗ್‌ಡಮ್ಕೊಹರ್ಟ್‌ 2 ಅಕಾಡೆಮಿಯು ಜುಲೈ 2025 ರಲ್ಲಿ ಪೂರ್ಣಗೊಂಡಿದೆವಿಶ್ವವಿದ್ಯಾಲಯ ಅಥವಾ ಅಪ್ರೆಂಟಿಸ್‌ಶಿಪ್‌ ದಾಖಲಾತಿಗೆ ಅಂತಿಮ ದಿನಾಂಕ: ಸೆಪ್ಟೆಂಬರ್ 2026
    ಸೌತ್‌ ಆಫ್ರಿಕಾಕೊಹರ್ಟ್‌ 2 ಅಕಾಡೆಮಿಯು ಡಿಸೆಂಬರ್ 2025 ರಲ್ಲಿ ಪೂರ್ಣಗೊಂಡಿದೆವಿಶ್ವವಿದ್ಯಾಲಯದ ದಾಖಲಾತಿಗೆ ಅಂತಿಮ ದಿನಾಂಕ: ಮಾರ್ಚ್ 2027

     

    ಯುನೈಟೆಡ್ ಸ್ಟೇಟ್ಸ್ಕೊಹರ್ಟ್‌ 3 ಅಕಾಡೆಮಿಯು ಮೇ 2026 ರಲ್ಲಿ ಪೂರ್ಣಗೊಳ್ಳಲಿದೆಕಾಲೇಜು/ವಿಶ್ವವಿದ್ಯಾಲಯ ದಾಖಲಾತಿಗೆ ಅಂತಿಮ ದಿನಾಂಕ: ಆಗಸ್ಟ್ 2027
    ಯುನೈಟೆಡ್ ಕಿಂಗ್‌ಡಮ್ಕೊಹರ್ಟ್‌ 3 ಅಕಾಡೆಮಿಯು ಜುಲೈ 2026 ರಲ್ಲಿ ಪೂರ್ಣಗೊಳ್ಳಲಿದೆವಿಶ್ವವಿದ್ಯಾಲಯ ಅಥವಾ ಅಪ್ರೆಂಟಿಸ್‌ಶಿಪ್‌ ದಾಖಲಾತಿಗೆ ಅಂತಿಮ ದಿನಾಂಕ: ಸೆಪ್ಟೆಂಬರ್ 2027
    ಸೌತ್‌ ಆಫ್ರಿಕಾಕೊಹರ್ಟ್‌ 3 ಅಕಾಡೆಮಿಯು ಡಿಸೆಂಬರ್ 2026 ರಲ್ಲಿ ಪೂರ್ಣಗೊಳ್ಳಲಿದೆವಿಶ್ವವಿದ್ಯಾಲಯದ ದಾಖಲಾತಿಗೆ ಅಂತಿಮ ದಿನಾಂಕ: ಮಾರ್ಚ್ 2028

     

  • ಒಂದು ವೇಳೆ ನಾನು ಮೊದಲ ವರ್ಷದ ಮಧ್ಯಭಾಗದಲ್ಲಿ ನನ್ನ ಮೇಜರ್ (ವಿಷಯ) ಬದಲಾಯಿಸಲು, ಬೇರೆ ಕಾಲೇಜಿಗೆ ವರ್ಗಾವಣೆ ಮಾಡಿಕೊಳ್ಳಲು ಅಥವಾ ಶಾಲೆಯಿಂದ/ಅಪ್ರೆಂಟಿಸ್‌ಶಿಪ್‌ನಿಂದ ಹೊರಬರಲು ನಿರ್ಧರಿಸಿದರೆ ಏನಾಗುತ್ತದೆ?

    ನೀವು ಅರ್ಹ ಉನ್ನತ ಶಿಕ್ಷಣ ಕಾರ್ಯಕ್ರಮದಿಂದ ಹೊರಬಂದರೆ ಈ ಸ್ಕಾಲರ್‌ಶಿಪ್ ಸೌಲಭ್ಯ ಅಲ್ಲಿಗೆ ಕೊನೆಗೊಳ್ಳುತ್ತದೆ ಮತ್ತು ಇದನ್ನು ಇನ್ನೊಬ್ಬರಿಗೆ ವರ್ಗಾಯಿಸಲು ಬರುವುದಿಲ್ಲ. ಸ್ಕಾಲರ್‌ಶಿಪ್‌ನ ಎರಡನೇ ಕಂತನ್ನು ಪಡೆಯಲು ನೀವು ನಿಮ್ಮ ಇಂಜಿನಿಯರಿಂಗ್ ವ್ಯಾಸಂಗವನ್ನು ಮುಂದುವರಿಸುವುದು ಕಡ್ಡಾಯವಾಗಿರುತ್ತದೆ.

    ಒಮ್ಮೆ ನೀಡಿದ ಸ್ಕಾಲರ್‌ಶಿಪ್‌ ಹಣವನ್ನು ಯಾವುದೇ ವಿದ್ಯಾರ್ಥಿಯಿಂದ ಯಾವ ಕಾರಣಕ್ಕೂ ನಾವು ವಾಪಸ್ ಕೇಳುವುದಿಲ್ಲ.

  • ನನಗೆ ನನ್ನ ಸ್ಕಾಲರ್‌ಶಿಪ್ ಹೇಗೆ ಮತ್ತು ಯಾವಾಗ ದೊರೆಯುತ್ತದೆ?

    Next Engineers ಗೆ ಅಗತ್ಯವಿರುವ ಫಾರ್ಮ್‌ಗಳನ್ನು ಭರ್ತಿ ಮಾಡುವುದೂ ಸೇರಿದಂತೆ ಸ್ಕಾಲರ್‌ಶಿಪ್‌ ಪ್ಲಾಟ್‌ಫಾರ್ಮ್‌ನಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸಿದ ನಂತರ, ಹಣವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಸ್ಕಾಲರ್‌ಶಿಪ್‌ಗೆ ಅರ್ಹರಾದ ವಿದ್ಯಾರ್ಥಿಯ ಎಲ್ಲಾ ಫಾರ್ಮ್‌ಗಳನ್ನು ಅನುಮೋದಿಸಿದ 45 ದಿನಗಳೊಳಗೆ FHI 360 ಸಂಸ್ಥೆಯು ಸ್ಕಾಲರ್‌ಶಿಪ್‌ನ ಹಣವನ್ನು ವಿತರಿಸುತ್ತದೆ.

  • ಸ್ಕಾಲರ್‌ಶಿಪ್‌ ಪಡೆಯಲು ವಿದ್ಯಾರ್ಥಿಗಳು ತಮ್ಮದೇ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕೆ?

    ವಿದ್ಯಾರ್ಥಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಮಾತ್ರ ಸ್ಕಾಲರ್‌ಶಿಪ್‌ ಹಣವನ್ನು ಪಾವತಿಸಲಾಗುತ್ತದೆ. ಪೋಷಕರು ಅಥವಾ ಪಾಲಕರನ್ನೂ ಸಹ ಈ ಖಾತೆಯಲ್ಲಿ ಜಂಟಿ ಖಾತೆದಾರರನ್ನಾಗಿ ಮಾಡಬಹುದು.

  • ನನ್ನ ಸ್ಕಾಲರ್‌ಶಿಪ್‌ಗೆ ತೆರಿಗೆ ಹಾಕಲಾಗುತ್ತದೆಯೇ?

    ಪ್ರತಿ ವ್ಯಕ್ತಿಯ ತೆರಿಗೆಯ ಪರಿಸ್ಥಿತಿಯು ವಿಭಿನ್ನವಾಗಿರುತ್ತದೆ; ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ದೇಶದ ತೆರಿಗೆ ಸಲಹೆಗಾರರನ್ನು ಅಥವಾ ನಿಮ್ಮ ಶಾಲೆಯ ಹಣಕಾಸು ನೆರವು ಕಚೇರಿಯನ್ನು ಸಂಪರ್ಕಿಸಿ.

  • ಮೊದಲ ಸ್ಕಾಲರ್‌ಶಿಪ್‌ ಹಣವನ್ನು ಪಡೆಯುವ ಮೊದಲು ಟ್ಯೂಶನ್‌ ಶುಲ್ಕವನ್ನು ಪಾವತಿಸಿರಲೇಬೇಕೆ?

    ಸ್ಕಾಲರ್‌ಶಿಪ್‌ ಹಣವನ್ನು ಪಡೆಯಲು, ವಿದ್ಯಾರ್ಥಿಗಳು ದಾಖಲಾತಿಯ ಪುರಾವೆಯನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ. ನೀವು ಅಕಾಡೆಮಿಗೆ ಹಾಜರಾದ ನಗರದ ಆಧಾರದ ಮೇಲೆ, ಈ ಕೆಳಗಿನ ಮೂರು ವಿಧಾನಗಳಲ್ಲಿ ಒಂದನ್ನು ಅನುಸರಿಸಬಹುದು:

    • ತರಗತಿ ಪಟ್ಟಿಯ ಪ್ರತಿಯನ್ನು ಸಲ್ಲಿಸುವುದು; ಅಥವಾ

    • ದಾಖಲಾತಿ/ನೋಂದಣಿಯ ಅಧಿಕೃತ ಪತ್ರವನ್ನು ಸಲ್ಲಿಸುವುದು; ಅಥವಾ

    • ಪ್ರಾರಂಭಿಕ ಟ್ಯೂಶನ್‌ ಫೀ ಪಾವತಿಯ ಪ್ರತಿಯನ್ನು ಸಲ್ಲಿಸುವುದು (ಇದು ದಾಖಲಾತಿಗಾಗಿ ಪಾವತಿಸಿದ ಆರಂಭಿಕ ಡೆಪಾಸಿಟ್ ಅನ್ನು ಒಳಗೊಂಡಿರಬೇಕು).

  • ಸ್ಕಾಲರ್‌ಶಿಪ್‌ ಅನ್ನು ಹಲವಾರು ಶೈಕ್ಷಣಿಕ ವರ್ಷಗಳಿಗೆ ಹಂಚಿಕೆ ಮಾಡುವಂತೆ ಅಥವಾ ಎರಡಕ್ಕಿಂತ ಹೆಚ್ಚು ಕಂತುಗಳಲ್ಲಿ ಪಡೆಯಲು ಸಾಧ್ಯವೇ?

    ಇಲ್ಲ, ಈ ಸ್ಕಾಲರ್‌ಶಿಪ್ ಅನ್ನು ನವೀಕರಿಸಲು ಸಾಧ್ಯವಿರುವುದಿಲ್ಲ. ಇದನ್ನು ನಿಮ್ಮ ಮೊದಲ ವರ್ಷದ ಮೊದಲ ಎರಡು ಗ್ರೇಡಿಂಗ್ ಅವಧಿಗಳಲ್ಲಿ ವಿತರಿಸಲಾಗುತ್ತದೆ.

  • ಒಂದು ವೇಳೆ ಸ್ಲಾಲರ್‌ಶಿಪ್‌ನ ಮೊತ್ತವು ಮೊದಲ ವರ್ಷದ ಶೈಕ್ಷಣಿಕ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ ಏನಾಗುತ್ತದೆ?

    ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ನ ಸಂಪೂರ್ಣ ಮೊತ್ತವನ್ನು ಪಡೆಯುತ್ತಾರೆ. ಈ ಸ್ಕಾಲರ್‌ಶಿಪ್‌ನ ಹಣವನ್ನು ವಿದ್ಯಾರ್ಥಿಗಳು ತಮ್ಮ ವಿವೇಚನೆಯಂತೆ ಮುಂದಿನ ಶೈಕ್ಷಣಿಕ ವರ್ಷಗಳ ತಮ್ಮ ಓದಿಗಾಗಿ ಬಳಸಿಕೊಳ್ಳಲು ಸ್ವತಂತ್ರರಾಗಿರುತ್ತಾರೆ.

  • ನಾನು ಕಾಲೇಜನ್ನು ಆಯ್ಕೆ ಮಾಡುವ ಮೊದಲೇ FAFSA ಅರ್ಜಿಯನ್ನು ಸಲ್ಲಿಸಬಹುದೇ? (ಅಮೆರಿಕದ ವಿದ್ಯಾರ್ಥಿಗಳಿಗೆ ಮಾತ್ರ)

    ಹೌದು, ನೀವು ಕಾಲೇಜನ್ನು ಆಯ್ಕೆ ಮಾಡುವ ಮೊದಲೇ FAFSA ಅರ್ಜಿಯನ್ನು ಸಲ್ಲಿಸಬಹುದು. ಇತರ ಆರ್ಥಿಕ ನೆರವಿನ ಅವಕಾಶಗಳನ್ನು ಪಡೆಯಲು, FAFSA ಅರ್ಜಿ ಲಭ್ಯವಾದ ಕೂಡಲೇ ಅದನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಗುತ್ತದೆ. FAFSA ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ: https://studentaid.gov/h/apply-for-aid/fafsa

  • ನಾನು ವಾಸಿಸುವ ದೇಶದ ಹೊರಗಿನ (ವಿದೇಶದ) ಕಾಲೇಜು ಅಥವಾ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದೇ?

    ಹೌದು, ವಿದ್ಯಾರ್ಥಿಗಳು ತಮ್ಮ ಇಚ್ಛೆಯ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಆದರೆ, ಸ್ಕಾಲರ್‌ಶಿಪ್‌ನ ಮೊತ್ತವು ಬದಲಾಗುವುದಿಲ್ಲ ಮತ್ತು ವಿದ್ಯಾರ್ಥಿಗಳು ತಮ್ಮ ದೇಶದ ಇತರ ವಿದ್ಯಾರ್ಥಿಗಳಂತೆ ನಿಗದಿತ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.

  • ನಾನು ಸೈನ್ಯಕ್ಕೆ ಸೇರಲು ಬಯಸಿದರೆ ಏನಾಗುತ್ತದೆ? ಆಗಲೂ ಸಹ ನಾನು ಸ್ಕಾಲರ್‌ಶಿಪ್‌ಗೆ ಅರ್ಹನಾಗಿರುತ್ತೇನೆಯೇ?

    ವಿದ್ಯಾರ್ಥಿಗಳು ಮಿಲಿಟರಿ ಅಥವಾ ಸೈನ್ಯಕ್ಕೆ ಸೇರ್ಪಡೆಗೊಳ್ಳಬಹುದು, ಆದರೆ ಸ್ಕಾಲರ್‌ಶಿಪ್‌ಗೆ ಅರ್ಹರಾಗಲು ಅವರು ಅನುಮೋದಿತ ಇಂಜಿನಿಯರಿಂಗ್ ಪ್ರೋಗ್ರಾಮ್‌ಗೆ ಅರ್ಜಿಯನ್ನು ಸಲ್ಲಿಸಿರಬೇಕು ಮತ್ತು ಆಯ್ಕೆಯಾಗಿರಬೇಕು. ವಿದ್ಯಾರ್ಥಿಗಳು Engineering Academy ಮುಗಿದ 1 ವರ್ಷದೊಳಗೆ ಅರ್ಹ ಇಂಜಿನಿಯರಿಂಗ್ ಪ್ರೋಗ್ರಾಮ್‌ಗೆ ದಾಖಲಾಗುವುದು ಕಡ್ಡಾಯವಾಗಿರುತ್ತದೆ.

  • ಭೌತಶಾಸ್ತ್ರವು ಈ ಶಿಷ್ಯವೇತನಕ್ಕೆ ಅರ್ಹವಾಗಿದೆಯೇ? ಹಾಗೆಯೇ ಕಂಪ್ಯೂಟರ್ ಸೈನ್ಸ್ ಅರ್ಹತೆ ಹೊಂದಿದೆಯೇ?

    ಅರ್ಹತೆ ಹೊಂದಿರುವ ಇಂಜಿನಿಯರಿಂಗ್ ಸಂಬಂಧಿತ ಕ್ಷೇತ್ರಗಳ ಪಟ್ಟಿಯನ್ನು ನೀವು Engineering Academy ಸ್ಕಾಲರ್‌ಶಿಪ್‌ ಅರ್ಹತಾ ನೀತಿಯಲ್ಲಿ ಕಾಣಬಹುದು. ಇಂಜಿನಿಯರಿಂಗ್ ಕಾಲೇಜಿನ ಅಡಿಯಲ್ಲಿ ಬರುವ ಎಲ್ಲಾ ಮೇಜರ್‌ಗಳು ಅಥವಾ ಕಾರ್ಯಕ್ರಮಗಳನ್ನು ಸ್ಕಾಲರ್‌ಶಿಪ್‌ಗೆ ಸ್ವಯಂಚಾಲಿತವಾಗಿ ಅರ್ಹವೆಂದು ಪರಿಗಣಿಸಲಾಗುತ್ತದೆ.

    ನೀತಿಯಲ್ಲಿ ಪಟ್ಟಿ ಮಾಡದ (ಮತ್ತು ಇಂಜಿನಿಯರಿಂಗ್ ಕಾಲೇಜಿನ ಅಡಿಯಲ್ಲಿ ಬರದ) ಕೋರ್ಸ್‌ಗಳಿಗಾಗಿ, ವಿದ್ಯಾರ್ಥಿಗಳು ತಾವು ಆರಿಸಿಕೊಂಡ ವಿಷಯವು ಇಂಜಿನಿಯರಿಂಗ್ ವೃತ್ತಿಜೀವನಕ್ಕೆ ಹೇಗೆ ಸಂಬಂಧಿಸಿದೆ ಎಂಬುದನ್ನು ವಿವರಿಸುವ ಲಿಖಿತ ಹೇಳಿಕೆಯನ್ನು (300 ಪದಗಳಿಗಿಂತ ಹೆಚ್ಚಿರಬಾರದು) ನೀಡಬೇಕಾಗುತ್ತದೆ. FHI 360 ಈ ಹೇಳಿಕೆಯನ್ನು ಪರಿಶೀಲಿಸಿ ನಂತರ ವಿದ್ಯಾರ್ಥಿಯ ಮೇಜರ್‌ ಅಥವಾ ಪ್ರೋಗ್ರಾಂ ಅನುಮೋದನೆ ಮತ್ತು ಸ್ಕಾಲರ್‌ಶಿಪ್‌ನ ಅರ್ಹತೆಯ ಬಗ್ಗೆ ವಿದ್ಯಾರ್ಥಿಗೆ ತಿಳಿಸುತ್ತದೆ.

  • ಸ್ಕಾಲರ್‌ಶಿಪ್‌ ಬಗ್ಗೆ ನನಗೆ ಇನ್ನೂ ಹೆಚ್ಚಿನ ಪ್ರಶ್ನೆಗಳಿದ್ದರೆ, ನಾನು ಯಾರನ್ನು ಸಂಪರ್ಕಿಸಬೇಕು?

    ನಿಮ್ಮ ಪ್ರಶ್ನೆಗಳನ್ನು nescholarships@fhi360.org ಗೆ ಇಮೇಲ್ ಮಾಡಿ ಮತ್ತು ನಮ್ಮ ತಂಡದ ಸದಸ್ಯರು ನಿಮ್ಮನ್ನು ಸಂಪರ್ಕಿಸುತ್ತಾರೆ.

  • Connect

    Want to know more or how to get involved? Are you an aspiring engineer or do you know one? We want to hear from you. Send us your questions and follow us on social media:

    Contact us: NextEngineers@fhi360.org

    Follow GE Aerospace
    Instagram LinkedIn X YouTube

    Follow GE VERNOVA
    Instagram LinkedIn X YouTube
    A groups of students

    Footer menu

    • ಬಗ್ಗೆ
    • Inspiration
    • Cities
    • ಸುದ್ದಿ

    Footer secondary

    • ಬಳಕೆಯ ನಿಯಮಗಳು
    • ಗೌಪ್ಯತಾ ನೀತಿ
    • ಕುಕೀ ನೀತಿ
    • ಸಂಶೋಧನಾ ಅಧ್ಯಯನದ ಸೂಚನೆ
    • Next Engineers ಗೌಪ್ಯತಾ ಸೂಚನೆ
    • GE Aerospace
    • GE Vernova
    © 2026 FHI360